ETV Bharat / city

ಅತ್ಯಾಚಾರ, ಗರ್ಭಪಾತ ಸೇರಿ ವಿವಿಧ ಸೆಕ್ಷನ್​ಗಳ ಅಡಿ ಟಾಕಳೆ ವಿರುದ್ಧ ನವ್ಯಶ್ರೀ ದೂರು

ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್​ ಟಾಕಳೆ ತಿಕ್ಕಾಟ ಮುಂದುವರೆದಿದೆ. ಇದರ ಬೆನ್ನಲ್ಲೇ ಇದೀಗ ಟಾಕಳೆ ವಿರುದ್ಧ ದೂರು ದಾಖಲು ಮಾಡಿದ್ದಾರೆ.

Navyashree R Rao
Navyashree R Rao
author img

By

Published : Jul 23, 2022, 10:36 PM IST

ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್‌ ಅತ್ಯಾಚಾರ, ಕಿಡ್ನಾಪ್,ಗರ್ಭಪಾತ, ಮೋಸ‌ ಸೇರಿದಂತೆ ಇತರ ಸೆಕ್ಸನ್​ಗಳ ಅಡಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ನವಶ್ರೀ ಆರ್. ರಾವ್​ ಇಂದು ಮಧ್ಯಾಹ್ನ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆಗಮಿಸಿ ಕೈಬರಹದಲ್ಲಿ ಹನ್ನೆರಡು ಪುಟಗಳ ದೂರು ನೀಡಿದ್ದಾರೆ.

ರಾಜಕುಮಾರ್​ ಟಾಕಳೆ ವಿರುದ್ಧ ನವ್ಯಶ್ರೀ ದೂರು ದಾಖಲು

ಸದ್ಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ರಾಜಕುಮಾರ್ ಟಾಕಳೆ ವಿರುದ್ಧ (376)ಅತ್ಯಾಚಾರ, (366)ಕಿಡ್ನಾಪ್, (312)ಗರ್ಭಪಾತ ಮಾಡಿಸಿದ್ದು, ‌(420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506)ಜೀವ ಬೆದರಿಕೆ, (509)ಗೌರವಕ್ಕೆ ಧಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ,(67A) ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆ್ಯಕ್ಟ್​​ಗಳನ್ನು ಹಾಕಿ ಎಫ್‌ಐಆರ್ ದಾಖಲಾಗಿದೆ.

ದೂರು ನೀಡಿದ ಬಳಿಕ ಬೆಳಗಾವಿ ಖಾಸಗಿ ಹೋಟೆಲ್‌ಗೆ ತೆರಳಿರುವ ನವ್ಯಶ್ರೀ, ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳಿ ಮತ್ತೆ ಸೋಮವಾರ ವಿಚಾರಣೆಗೆ ಹಾಜರಾಗಲಿದ್ದಾರೆ.‌ ಸದ್ಯ ರಾಜಕುಮಾರ್​ ಟಾಕಳೆ ನೀಡಿರುವ ದೂರಿನ‌ ವಿಚಾರಣೆಗೆ ಬೆಳಗಾವಿ ಎಪಿಎಂಸಿ ಪೊಲೀಸರು ನೋಟಿಸ್ ನೀಡಿದ್ದು, ಬೆಳಗಾವಿಯಲ್ಲಿ ಇರಲು ವಸತಿ ಸಮಸ್ಯೆ ಕಾರಣ ನೀಡಿ ಸೋಮವಾರ ಹಾಜರಾಗುವುದಾಗಿ ಮುಚ್ಛಳಿಕೆ ಪತ್ರವನ್ನ ನವಶ್ರೀ ಬರೆದು ಕೊಟ್ಟಿದ್ದು, ಸೋಮವಾರ ಪೊಲೀಸರ ತನಿಖೆಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿರಿ: ರಾಜಕುಮಾರ್ ‌ಟಾಕಳೆ ನನ್ನನ್ನೇ ಹನಿಟ್ರ್ಯಾಪ್ ಮಾಡಿದ್ದಾನೆ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರೋಪ

ಇದಕ್ಕೂ ಮೊದಲು ಮಾತನಾಡಿದ್ದ ನವ್ಯಶ್ರೀ, ನಾನು ಭಾರತದಲ್ಲಿ ಇಲ್ಲದೇ ಇರೋ ಸಂದರ್ಭದಲ್ಲಿ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಬಗ್ಗೆ ದೂರು ನೀಡಲು ಬರುವ ಮಾಹಿತಿ ತಿಳಿದು‌ ರಾಜಕುಮಾರ್​ ಟಾಕಳೆ ನನ್ನ ವಿರುದ್ಧ ದೂರು ನೀಡಿದ್ದರು.‌ ರಾಜಕುಮಾರ್ ‌ಟಾಕಳೆ ನನ್ನನ್ನೇ ಹನಿಟ್ರ್ಯಾಪ್ ಮಾಡಿದ್ದು ಆತನ ವಿರುದ್ಧ ದೂರು ಕೊಡುತ್ತೇನೆ‌ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್ ರಾವ್ ಹೇಳಿದರು.

ರಾಜಕುಮಾರ ನೀಡಿರುವ ಸುಳ್ಳು ‌ದೂರನ್ನು ತಿರಸ್ಕೃತ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ವಿಡಿಯೋ ನಡೆದಿರೋದು ಕುಮಾರ ಕೃಪ ಸರ್ಕಾರಿ ಅತಿಥಿ ಗೃಹ ದುರುಪಯೋಗ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.