ETV Bharat / city

'ಹಿಜಾಬ್ ತೆಗಿಸಬೇಡಿ'.. ಶಾಲಾ‌ ಸಿಬ್ಬಂದಿ ‌ಜೊತೆಗೆ ಸಾಮಾಜಿಕ ‌ಹೋರಾಟಗಾರ್ತಿ ವಾಗ್ವಾದ - Muslim clash with belagavi school staff

ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು. ಆಗಲೂ ಹೀಗೆ ವಿದ್ಯಾರ್ಥಿನಿಯರನ್ನು ಕರೆದೊಯ್ಯುತ್ತಿದ್ದರಾ? ಉಳಿದ ವಿದ್ಯಾರ್ಥಿಗಳನ್ನು ಹಾಗೆ ಕರೆದುಕೊಂಡು ಹೋಗಿ ನೋಡೋಣ‌. ತಾವು ಈ ರೀತಿ ಮಾಡುವುದು ಸರಿಯಲ್ಲ ಎಂದು ಸೀಮಾ ಅವರು ಶಾಲಾ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು..

muslim social worker clash with belagavi school staff about hijab
ಹಿಜಾಬ್​ ಸಂಬಂಧ ಶಾಲಾ‌ ಸಿಬ್ಬಂದಿ ‌ಜೊತೆಗೆ ಸಾಮಾಜಿಕ ‌ಹೋರಾಟಗಾರ್ತಿ ಕಿರಿಕ್
author img

By

Published : Feb 15, 2022, 11:58 AM IST

ಬೆಳಗಾವಿ : ಹಿಜಾಬ್, ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶ, ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶವಿದ್ದರೂ ಬೆಳಗಾವಿಯ ಸರ್ದಾರ್ ಸರ್ಕಾರಿ ಪ್ರೌಢ ಶಾಲೆಯ ಕೆಲ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದಿದ್ದಾರೆ. ಶಾಲೆಗೆ ಬಂದ ನಂತರ ಹಿಜಾಬ್ ತೆಗೆಸುತ್ತಿರುವ ಶಾಲಾ ಸಿಬ್ಬಂದಿ ಜೊತೆಗೆ ಸಾಮಾಜಿಕ ಹೋರಾಟಗಾರ್ತಿ ಓರ್ವರು ವಾಗ್ವಾದ ನಡೆಸಿದ್ದಾರೆ.

ಇಂದು ಕೂಡ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ‌ಶಾಲೆಗೆ ಬಂದಿದ್ದರು. ಆ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಗೆ ಕರೆದೊಯ್ಯುತ್ತಿರುವ ಸಿಬ್ಬಂದಿ ಹಿಜಾಬ್ ತೆಗೆಸಿ ನಂತರ ತರಗತಿಗೆ ಕಳುಹಿಸುತ್ತಿದ್ದಾರೆ.

ಈ ಹಿನ್ನೆಲೆ, ಮಕ್ಕಳು ಧರಿಸಿರುವ ಹಿಜಾಬ್ ಅನ್ನು ಏಕೆ‌ ತೆಗೆಸುತ್ತಿದ್ದೀರಾ? ಎಂದು ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮದಾರ್ ಶಾಲಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.

ಹಿಜಾಬ್​ ಸಂಬಂಧ ಶಾಲಾ‌ ಸಿಬ್ಬಂದಿ ‌ಜೊತೆಗೆ ಸಾಮಾಜಿಕ ‌ಹೋರಾಟಗಾರ್ತಿ ವಾಗ್ವಾದ..

ಇದನ್ನೂ ಓದಿ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು: ಮಾಧ್ಯಮದವರ ಮೇಲೆ ಪೋಷಕರು ಗರಂ

ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸಿ ಶಾಲೆಗೆ ಬರುತ್ತಿದ್ದರು. ಆಗಲೂ ಹೀಗೆ ವಿದ್ಯಾರ್ಥಿನಿಯರನ್ನು ಕರೆದೊಯ್ಯುತ್ತಿದ್ದರಾ? ಉಳಿದ ವಿದ್ಯಾರ್ಥಿಗಳನ್ನು ಹಾಗೆ ಕರೆದುಕೊಂಡು ಹೋಗಿ ನೋಡೋಣ‌. ತಾವು ಈ ರೀತಿ ಮಾಡುವುದು ಸರಿಯಲ್ಲ ಎಂದು ಸೀಮಾ ಅವರು ಶಾಲಾ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಪೊಲೀಸರೊಂದಿಗೂ ಸೀಮಾ ವಾಗ್ವಾದ ನಡೆಸಿದರು. ತಕ್ಷಣವೇ ಸೀಮಾ ಮತ್ತು ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಶಾಲಾ ಆವರಣದಿಂದ ಹೊರ ಕಳುಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.