ಬೆಳಗಾವಿ: ಕೋವಿಶೀಲ್ಡ್ ಲಸಿಕೆ ಬರುವ ಬಗ್ಗೆ ಸರ್ಕಾರದಿಂದ ನಿರ್ದೇಶನ ಬಂದಿದೆ. ಬೆಳಗಾವಿಗೆ ವ್ಯಾಕ್ಸಿನ್ ಬರುವ ಸಮಯ ಕೂಡ ತಿಳಿಸಲಾಗುವುದು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಡಿಹೆಚ್ಒ ಶಶಿಕಾಂತ ಮುನ್ಯಾಳ ಮಾಹಿತಿ ನೀಡಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೊರೊನಾ ಲಸಿಕೆ ಸ್ವೀಕರಿಸುವ ಹಾಗೂ ಸಾಗಿಸುವ ಪ್ರಕ್ರಿಯೆಯ ಬಗ್ಗೆ ಈಗಾಗಲೇ ಸಿದ್ಧತೆಯನ್ನು ಪರಿಶೀಲಿಸಲಾಗಿದೆ. ರಸ್ತೆ ಅಥವಾ ಏರಲಿಫ್ಟ್ ಯಾವುದೇ ರೀತಿಯಿಂದಲೂ ಬಂದರೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ವಿಭಾಗದಲ್ಲಿರುವ ಎಂಟು ಜಿಲ್ಲೆಗಳು ಸೇರಿ ಎರಡು ಲಕ್ಷಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ಬರಲಿವೆ.
ಓದಿ: ರಾಜ್ಯಕ್ಕೂ ಬಂತು ಸಂಜೀವಿನಿ.. ಬಿಬಿಎಂಪಿಗೆ 1.60 ಲಕ್ಷ ಡೋಸ್ ಹಸ್ತಾಂತರ
240ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಕೇಂದ್ರದಲ್ಲೂ ಐದು ಜನ ಸಿಬ್ಬಂದಿ ಇರುತ್ತಾರೆ. ಅವರ ಮೂಲಕ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ. 8 ಜಿಲ್ಲೆಗೆ ಇಲ್ಲಿಂದಲೇ ಲಸಿಕೆ ವಿತರಣೆ ಆಗಲಿವೆ ಎಂದು ತಿಳಿಸಿದರು.