ETV Bharat / city

ಮತದಾನಕ್ಕೆ ಸಾಲಿನಲ್ಲಿ ನಿಂತಿದ್ದ ಜನ: ತಾವೇ ಡೆಸ್ಕ್ ತಂದಿಟ್ಟು ಸರಳತೆ ಮೆರೆದ ಬೆಳಗಾವಿ ಡಿಸಿ - ಕರ್ನಾಟಕ ವಿಧಾನಪರಿಷತ್ ಚುನಾವಣೆ 2022

ವಾಯವ್ಯ ಶಿಕ್ಷಕರ, ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗೆ ಭೇಟಿ ನೀಡಿದ ವೇಳೆ ಡಿಸಿ ನಿತೇಶ್ ಪಾಟೀಲ್ ಸರಳತೆ ಮೆರೆದರು.

ಬೆಳಗಾವಿ ಡಿಸಿ ಸರಳತೆ
ಬೆಳಗಾವಿ ಡಿಸಿ ಸರಳತೆ
author img

By

Published : Jun 13, 2022, 11:29 AM IST

Updated : Jun 13, 2022, 11:49 AM IST

ಬೆಳಗಾವಿ: ವಾಯುವ್ಯ ಶಿಕ್ಷಕರ, ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ನಗರ ಮತಗಟ್ಟೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದರು. ಈ ವೇಳೆ, ಬಿಸಿಲಿನಲ್ಲಿ ಸಾಲಿನಲ್ಲಿ ನಿಂತಿದ್ದನ್ನು ಗಮನಿಸಿದ ಡಿಸಿ, ಮತದಾರರಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಿದರು. ವಿಶೇಷ ಎಂದರೆ ಸಿಬ್ಬಂದಿ ಜೊತೆ ಸೇರಿ ತಾವೇ ಕ್ಲಾಸ್​ ರೂಂನಿಂದ ಡೆಸ್ಕ್ ತಂದು ಹಾಕಿ ಸರಳತೆ ಮೆರೆದರು. ಅಷ್ಟೇ ಅಲ್ಲ ವಿಶೇಷಚೇತನ ಮತದಾರನನ್ನು ತಾವೇ ಮತಗಟ್ಟೆಗೆ ಕರೆದೊಯ್ದರು.

ಶಾಸಕ ಅನಿಲ್ ಬೆನಕೆಯಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪ್ರತಿಕ್ರಿಯಿಸಿ, ಮತದಾನ ಇಲ್ಲದವರು ಮತಗಟ್ಟೆಗೆ ಭೇಟಿ ನೀಡಲು ಅವಕಾಶ ಇಲ್ಲ. ಆದರೆ, ವಿಶ್ವೇಶ್ವರಯ್ಯ ಸರ್ಕಾರಿ ಶಾಲೆಯ ಮತಗಟ್ಟೆಗೆ ಅನಿಲ್ ಬೆನಕೆ ಭೇಟಿ ನೀಡಿರುವ ಮಾಹಿತಿ ಇದೆ. ಈ ಬಗ್ಗೆ ಮಾಹಿತಿ ನೀಡುವಂತೆ ಮತಗಟ್ಟೆ ಅಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಮತಗಟ್ಟೆಗೆ ಭೇಟಿ ನೀಡಿರುವ ವಿಡಿಯೋಗಳು ನಮ್ಮ ಬಳಿ ಇವೆ. ಹೀಗಾಗಿ ಲಿಖಿತ ದೂರು ನೀಡುವಂತೆ ಮತಗಟ್ಟೆ ಅಧಿಕಾರಿಗೆ ಸೂಚಿಸಿದ್ದೇನೆ. ಮತಗಟ್ಟೆ ಅಧಿಕಾರಿ ದೂರು ನೀಡಲಿದ್ದಾರೆ ಎಂದರು.

ಡೆಸ್ಕ್ ತಂದಿಟ್ಟು ಸರಳತೆ ಮೆರೆದ ಬೆಳಗಾವಿ ಡಿಸಿ

ಮತದಾರರಿಗೆ ಹಣ, ವಾಚ್ ಹಂಚಿಕೆ ಆರೋಪದ ಬಗ್ಗೆ ನಮಗೂ ನಿನ್ನೆ ಹಲವು ದೂರುಗಳು ಬಂದಿದ್ದವು. ನಮ್ಮ ಹಲವು ತಂಡಗಳು ಕಾರ್ಯಾಚರಣೆ ನಡೆಸಿವೆ. ಆದರೆ, ಎಲ್ಲೂ ಹಣ, ವಾಚ್ ಹಂಚಿಕೆ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪ: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಹಿನ್ನೆಲೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆಗೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿದರು. ಈ ವೇಳೆ, ಚುನಾವಣಾ ನೀತಿ ಸಂಹಿತೆ ಮತದಾನದ ಕೊಠಡಿಗೆ ಭೇಟಿ ನೀಡಿದರು. ಜೊತೆಗೆ ಮತದಾನದ ಕೊಠಡಿಯಲ್ಲೇ ಮೊಬೈಲ್​​ನಲ್ಲಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

(ಇದನ್ನೂ ಓದಿ: ಪರಿಷತ್ ಚುನಾವಣೆ: ಮತದಾನ ಆರಂಭ, ಧಾರವಾಡದಲ್ಲಿ ಪತ್ನಿ ಸಮೇತ ಮತಗಟ್ಟೆಗೆ ಬಂದ ಅಭ್ಯರ್ಥಿ)

Last Updated : Jun 13, 2022, 11:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.