ಬೆಳಗಾವಿ: ಸವದತ್ತಿ ಬಳಿ ಮಾಜಿ ಸಚಿವ, ಶಾಸಕ ಮುರುಗೇಶ್ ನಿರಾಣಿಯವರ ಕಾರು ಅಪಘಾತವಾಗಿದ್ದು, ಅವರ ಆಪ್ತ ಸಹಾಯಕ ಬಸವರಾಜ ಬಾಗಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಜಿಲ್ಲೆಯ ಸವದತ್ತಿಯ ತಾಲೂಕು ಪಂಚಾಯತಿ ಬಳಿ ಮುರುಗೇಶ್ ನಿರಾಣಿಯ ಕಾರು, ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
![MLA car accident](https://etvbharatimages.akamaized.net/etvbharat/prod-images/3733785_dhjd.jpg)
ಸವದತ್ತಿ-ಧಾರವಾಡ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಗಾಯಗೊಂಡ ಶಾಸಕರ ಆಪ್ತ ಕಾರ್ಯದರ್ಶಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.