ETV Bharat / city

ಸ್ತಬ್ಧವಾಯ್ತು 'ಉತ್ತರ'ದ ಧ್ವನಿ: ಸಚಿವ ಉಮೇಶ್ ಕತ್ತಿ ನಡೆದು ಬಂದ ಹಾದಿ..

author img

By

Published : Sep 7, 2022, 6:42 AM IST

Updated : Sep 7, 2022, 7:00 AM IST

ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿರುವ ಕಾರಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕನಸು ಕಂಡಿದ್ದ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಆ ಭಾಗದ ಜನಪರ ಧ್ವನಿಯೊಂದು ಶಾಂತವಾಗಿದೆ.

Umesh Katti Passes Away
Umesh Katti Passes Away

ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ.

1961ರ ಮಾರ್ಚ್ 14 ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಜನಿಸಿದರು. ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಖಾಲಿಯಾಗಿತ್ತು. 1985ರಲ್ಲಿ ಉಮೇಶ್​ ಕತ್ತಿ, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು. ನಂತರ ರಾಜಕೀಯ ಕ್ಷೇತ್ರದಲ್ಲಿ ಹೊಸ ಹೊಸ ಎತ್ತರಕ್ಕೆ ಬೆಳೆದು ನಿಂತರು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಜೊತೆಗೆ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮುಖಂಡರಾಗಿಯೂ ಗುರುತಿಸಿಕೊಳ್ಳುತ್ತಾರೆ. ಜನತಾದಳ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಹಿರಿಮೆ ಇವರದ್ದು.

1. 9 ಬಾರಿ ಸ್ಪರ್ಧೆ, 8 ಸಲ ಶಾಸಕ: ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿದ್ದ ಕತ್ತಿ, ಪ್ರಸಕ್ತ ಅವಧಿಯೂ ಸೇರಿದಂತೆ ಎಂಟು ಬಾರಿ ಗೆಲುವಿನ ನಗೆ ಬೀರಿದ್ದರು. ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಕೇವಲ 800 ಮತಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿದ್ದರು. ಜನಸಂಖ್ಯೆಗೆ ಅನುಗುಣವಾಗಿ ಕರ್ನಾಟಕವನ್ನು ಮೂರು ರಾಜ್ಯಗಳಾಗಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗ ಸಭೆಯಲ್ಲಿ ಹೇಳಿ ಗಮನ ಸೆಳೆದಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಧ್ವನಿ ಎತ್ತುತ್ತಿದ್ದ ಕತ್ತಿ ವಿಶೇಷ ಕಾರಣದಿಂದ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ.

2. ಉಮೇಶ್‌ ಕತ್ತಿ ರಾಜಕೀಯ ಹಾದಿ ಹೀಗಿತ್ತು:

1985 ರಲ್ಲಿ ಮೊದಲ ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆ
1989 ರಲ್ಲಿ ಎರಡನೇ ಬಾರಿ ಶಾಸಕರಾಗಿ ಆಯ್ಕೆ
1994 ರಲ್ಲಿ ಮೂರನೇ ಬಾರಿ ಆಯ್ಕೆ
1999 ರಲ್ಲಿ ಸಂಯುಕ್ತ ಜನತಾದಳದಿಂದ ಆಯ್ಕೆ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶ
2004 ರಲ್ಲಿ ಕಾಂಗ್ರೆಸ್​​​ನಿಂದ ಸ್ಪರ್ಧಿಸಿ ಮೊದಲ ಬಾರಿ ಸೋಲು
2008 ರಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿ ಗೆಲುವು, ಐದನೇ ಬಾರಿ ಶಾಸನಸಭೆ ಪ್ರವೇಶ
2008 ರಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಜೆಡಿಎಸ್​​ಗೆ ರಾಜೀನಾಮೆ, ಬಿಜೆಪಿಯಿಂದ ಸ್ಪರ್ಧೆ, ಉಪಚುನಾವಣೆಯಲ್ಲಿ ಗೆಲುವು
2013 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು, ಏಳನೇ ಬಾರಿ ವಿಧಾನಸಭೆ ಪ್ರವೇಶ
2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎಂಟನೇ ಬಾರಿ ಗೆದ್ದು ಶಾಸಕರಾಗಿ ಆಯ್ಕೆ

ಇದನ್ನೂ ಓದಿ: ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ವಿಧಿವಶ

3. ಸಚಿವರಾಗಿ..: 1994 ರಲ್ಲಿ ಜನತಾದಳ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಮೊದಲ ಬಾರಿ ಸಚಿವ ಸ್ಥಾನ, ದೇವೇಗೌಡರ ಸಂಪುಟದಲ್ಲಿ ಸಕ್ಕರೆ ಸಚಿವ ಸ್ಥಾನ ದೊರೆತಿತ್ತು.
1996 ಜೆ.ಹೆಚ್.ಪಟೇಲ್ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಮುಂದುವರಿಕೆ
2008 ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ,ಬಂಧೀಖಾನೆ ಸಚಿವ ಸ್ಥಾನ
2011 ರಲ್ಲಿ ಸದಾನಂದಗೌಡರ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ
2012 ರಲ್ಲಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಕೃಷಿ ಸಚಿವ ಸ್ಥಾನ
2019 ರಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಸಂಪುಟದಲ್ಲಿ ಸಚಿವ ಸ್ಥಾನ
2021 ರಲ್ಲಿ ಬಸವರಾಜ ಬೊಮ್ಮಾಯಿ‌ ಸಂಪುಟದಲ್ಲಿ ಅರಣ್ಯ, ಆಹಾರ ಸಚಿವ ಸ್ಥಾನ

4. ಆರು ಸಲ ಪಕ್ಷ ಬದಲಿಸಿದ್ದ ಉಮೇಶ್‌ ಕತ್ತಿ: ಜನತಾ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ್ದ ಉಮೇಶ್ ಕತ್ತಿ, ನಂತರ ಜನತಾದಳಕ್ಕೆ ಬಂದಿದ್ದರು. ಜನತಾದಳ ಇಬ್ಭಾಗವಾದಾಗ ಜೆ.ಹೆಚ್.ಪಟೇಲ್ ಬಣದೊಂದಿಗೆ ನಿಂತು ಜೆಡಿಯು ಸೇರಿದ್ದರು. ಪಟೇಲ್ ನಿಧನದ ನಂತರ ಅಲ್ಲೂ ಇರದೆ ಜೆಡಿಎಸ್ ಸೇರಲಾಗದೆ 2004 ರಲ್ಲಿ ಕಾಂಗ್ರೆಸ್ ಸೇರಿಕೊಂಡು ಮೊದಲ ಸಲ ಸೋಲಿನ ಕಹಿ ಕಂಡರು. ಅಲ್ಲಿಂದ 2008 ರಲ್ಲಿ ಜೆಡಿಎಸ್ ಸೇರಿ ಗೆದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಅಲ್ಲಿಂದ ಬಿಜೆಪಿ ಜೊತೆಯಲ್ಲಿಯೇ ಇದ್ದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಆಗಲೇಬೇಕು: ಸಚಿವ ಉಮೇಶ್ ಕತ್ತಿ

5. ಪ್ರತ್ಯೇಕ ರಾಜ್ಯ ರಚನೆ ಕೂಗು, ಸಿಎಂ ಸ್ಥಾನದ ಆಕಾಂಕ್ಷೆ: ಮಹಾರಾಷ್ಟ್ರಕ್ಕೆ ತುಬ್ಬಿ-ಬಬಲಾದ ಏತ ನೀರಾವರಿ ಯೋಜನೆಯಿಂದ ಕೃಷ್ಣಾ ನೀರು ಬಿಡುವ ಕುರಿತು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿದ್ದ ಕತ್ತಿ, ಈ ಪ್ರದೇಶವನ್ನು ನಿರ್ಲಕ್ಷಿಸಿದರೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತ್ಯೇಕ ರಾಜ್ಯದ ಬಗ್ಗೆ ಆಗಾಗ ಹೇಳಿಕೆ ನೀಡುತ್ತಲೇ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎನ್ನುವ ಹೇಳಿಕೆಯನ್ನೂ ನೀಡುತ್ತಿದ್ದರು. ಉಮೇಶ್ ಕತ್ತಿ ಕೇವಲ ರಾಜಕಾರಣಿ ಮಾತ್ರವಲ್ಲದೆ, ಉದ್ಯಮಿ ಹಾಗು ಕೃಷಿಕರೂ ಆಗಿದ್ದರು. ಬೆಳಗಾವಿಯಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಹೊಂದಿದ್ದಾರೆ.

Last Updated : Sep 7, 2022, 7:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.