ಬೆಳಗಾವಿ: ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ ಪಾಟೀಲ ಮನೆಗೆ ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ, ಪತ್ನಿ ಜಯಶ್ರೀ ಹಾಗೂ ತಾಯಿ ಪಾರ್ವತಿಗೆ ವೈಯಕ್ತಿಕವಾಗಿ 5 ಲಕ್ಷ ಪರಿಹಾರ ನೀಡಿದರು. ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಇದ್ದರು.
ಇದೇ ವೇಳೆ ಸಂತೋಷ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಕುಟುಂಬಸ್ಥರು ಕೋರಿದರು. ಈ ಕುರಿತು ಮನವಿ ಮಾಡಿದ್ದೇವೆ. ಸಿಎಂ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂತೋಷ ಪಾಟೀಲಗೆ ಬರಬೇಕಿದ್ದ ಕಾಮಗಾರಿಯ ಬಿಲ್ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಕ್ರಮವಹಿಸುವುದಾಗಿ ನಿರಾಣಿ ಭರವಸೆ ನೀಡಿದರು.
![ಗುತ್ತಿಗೆದಾರ ಸಂತೋಷ ಮನೆಗೆ ಸಚಿವ ನಿರಾಣಿ ಭೇಟಿ](https://etvbharatimages.akamaized.net/etvbharat/prod-images/kn-bgm-06-14-santosh-manege-nirani-bheti-7201786_14042022200545_1404f_1649946945_374.jpg)
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗೋಷ್ಟಿ ನಡೆಸಿದ ಈಶ್ವರಪ್ಪ ನಾಳೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇನ್ನೊಂದೆಡೆ, ಆರೋಪಿಗಳ ಬಂಧನವಾಗಬೇಕು ಎಂದು ಸಂತೋಷ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಆಹೋರಾತ್ರಿ ಧರಣಿ ಮುಂದುವರಿಸಿದೆ.
ಇದನ್ನೂ ಓದಿ: ರಾಜೀನಾಮೆ ಕೇಳಿಲ್ಲ, ಈಶ್ವರಪ್ಪ ಬಂಧನ ಆಗ್ಬೇಕು: ಗುತ್ತಿಗೆದಾರ ಸಂತೋಷ ಸಹೋದರ