ಚಿಕ್ಕೋಡಿ : ಚಾಲಕನ ನಿಯಂತ್ರಣ ತಪ್ಪಿದ ಎಂಸ್ಯಾಂಡ್ ತುಂಬಿದ ಮಿನಿ ಲಾರಿಯೊಂದು ಟೋಲ್ ಗೇಟ್ಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಟೋಲ್ ನಾಕಾ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಎಂಸ್ಯಾಂಡ್ ತುಂಬಿದ ಮಿನಿ ಲಾರಿಯೊಂದು ನಿಪ್ಪಾಣಿ- ಮಹಾಲಿಂಗಪುರ ರಾಜ್ಯ ಹೆದ್ದಾರಿಯ ಮೂಲಕ ಚಿಂಚಣಿ ಹತ್ತಿರದ ಟೋಲ್ ಗೇಟ್ ಮೂಲಕ ಹಾಯ್ದು ಹೋಗುತ್ತಿರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಗೇಟ್ಗೆ ಗುದ್ದಿದೆ.
ಪರಿಣಾಮ ಮಿನಿಲಾರಿ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಸಂಬಂಧ ಚಿಕ್ಕೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.