ಬೆಳಗಾವಿ: ಬೆಳಗಾವಿಯ ಎಂಇಎಸ್ ಮುಖಂಡನೊಬ್ಬ ಉದ್ಧಟತನದ ಹೇಳಿಕೆ ನೀಡಿದ್ದಾನೆ. ಶಿವಸೇನೆ ಮುಖಂಡನ ಕಾರು ತಡೆದು ಮಹಾರಾಷ್ಟ್ರ ಬೋರ್ಡ್ ಕಿತ್ತಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಂಇಎಸ್ ಮುಖಂಡ ಶುಭಂ ಸಾಳುಂಕೆ, ಬೆಳಗಾವಿಯಲ್ಲಿ ಶಿವಸೇನೆ ಎಂಇಎಸ್ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಸದ್ಯ ಬಂಧಿಸಿಲ್ಲ. ಇನ್ಮುಂದೆ ಈ ರೀತಿಯಾದರೆ ಸಹಿಸಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾನೆ. ಏನಾದರೂ ಅನಾಹುತ ಆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತೆ. ನಾವು ನಮ್ಮ ಪದ್ಧತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಬೆಳಗಾವಿ ನೆಲದಲ್ಲೇ ನಿಂತು ಎಂಇಎಸ್ ಮುಖಂಡ ಧಮ್ಕಿ ಹಾಕಿದ್ದಾನೆ.
ಓದಿ: ಸಿದ್ದರಾಮಯ್ಯ V/s ರೂಪಾಲಿ: ಸದನದಲ್ಲಿ ಸದ್ದು ಮಾಡಿದ ಮಾತೃ ಪೂರ್ಣ ಯೋಜನೆ
ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಾನೂನು ಕೈಗೆ ತೆಗೆದುಕೊಳ್ಳುವುದಾಗಿ ಎಂಇಎಸ್ ಪುಂಡ ಬೆದರಿಕೆ ಹಾಕಿದ್ದಾನೆ.