ETV Bharat / city

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನವ ವಿವಾಹಿತನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ಕಾರಣ ನಿಗೂಢ! - ಬೆಳಗಾವಿ ಅಪರಾಧ ಸುದ್ದಿ

ಬೈಕ್​ನಲ್ಲಿ ಸಂಚರಿಸುವಾಗ ಹಿಂಬದಿಯಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ನವ ವಿವಾಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ನಡೆದಿದೆ..

Man killed by perpetrators in Belagavi, Newly married Man killed by perpetrators in Karnataka, Belagavi crime news, Murder in Belagavi, ಬೆಳಗಾವಿಯಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿ ಹತ್ಯೆ, ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದ ವ್ಯಕ್ತಿಯ ಕೊಲೆ. ಬೆಳಗಾವಿ ಅಪರಾಧ ಸುದ್ದಿ, ಬೆಳಗಾವಿಯಲ್ಲಿ ಕೊಲೆ,
ಚಿಂತಾಮಣಿ ಬಂಡಗರ ಕೊಲೆಯಾದ ವ್ಯಕ್ತಿ
author img

By

Published : May 3, 2022, 12:09 PM IST

ಬೆಳಗಾವಿ : ಕಳೆದ ಏಂಟು ತಿಂಗಳ ಹಿಂದಷ್ಟೇ ಆತ ಮದುವೆ ಆಗಿದ್ದ. ಕೆಲಸಕ್ಕೆ ತೆರಳಿ ಬೈಕ್​ನಲ್ಲಿ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕಿರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಕಾಗವಾಡ ತಾಲೂಕಿನ ಐನಾಪುರ-ಕಾತ್ರಾಳ ಕ್ರಾಸ್​ನ ರಸ್ತೆ ಪಕ್ಕದಲ್ಲಿ ನಡೆದಿದೆ.

Man killed by perpetrators in Belagavi, Newly married Man killed by perpetrators in Karnataka, Belagavi crime news, Murder in Belagavi, ಬೆಳಗಾವಿಯಲ್ಲಿ ದುಷ್ಕರ್ಮಿಗಳಿಂದ ವ್ಯಕ್ತಿ ಹತ್ಯೆ, ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದ ವ್ಯಕ್ತಿಯ ಕೊಲೆ. ಬೆಳಗಾವಿ ಅಪರಾಧ ಸುದ್ದಿ, ಬೆಳಗಾವಿಯಲ್ಲಿ ಕೊಲೆ,
ಚಿಂತಾಮಣಿ ಬಂಡಗರ ಕೊಲೆಯಾದ ವ್ಯಕ್ತಿ

ಕಾತ್ರಾಳ ಗ್ರಾಮದ ನಿವಾಸಿ ಚಿಂತಾಮಣಿ ಬಂಡಗರ (26) ಕೊಲೆಯಾದ ವ್ಯಕ್ತಿ. ಚಿಂತಾಮಣಿ‌ ಬಂಡಗರ ಕಳೆದ ಏಂಟು ತಿಂಗಳ ಹಿಂದಷ್ಟೇ ಮದುವೆ ಆಗಿದ್ದನು. ಎರಡು ತಿಂಗಳ ಹಿಂದೆ ಐನಾಪುರ ಗ್ರಾಮದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ. ನಿನ್ನೆ ತಡರಾತ್ರಿ ಮೆಡಿಕಲ್ ಶಾಪ್​ ಕೆಲಸ ಮುಗಿಸಿಕೊಂಡು ಐನಾಪೂರದಿಂದ ಕಾತ್ರಾಳ ಕಡೆ ವಾಪಸಾಗುತ್ತಿದ್ದರು.

ಓದಿ: ಮದುವೆಗೆ ಹುಡುಗಿ ಫೋಟೋ ತೋರಿಸಿ ಯುವಕನ ಹತ್ಯೆ; ಬಿಜೆಪಿ ಮುಖಂಡನ ಕೊಲೆ ರಹಸ್ಯ ಬಯಲು

ಕೆಲ ದುಷ್ಕರ್ಮಿಗಳು ಚಿಂತಾಮಣಿಯನ್ನು ಹಿಂಬಾಲಿಸಿದ್ದಾರೆ. ನಿರ್ಜನ ಪ್ರದೇಶ ಬರುತ್ತಿದ್ದಂತೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಚಿಂತಾಮಣಿ ಮೇಲೆ ದಾಳಿ ಮಾಡಿದ್ದಾರೆ. ಚೂಪಾದ ಆಯುಧದ ಪೆಟ್ಟು ಬಿದ್ದಿದ್ದರಿಂದ ಚಿಂತಾಮಣಿ ಬೈಕ್​ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಚಿಂತಾಮಣಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇನ್ನು ಈ ದಾರಿಯಲ್ಲಿ ಸಂಚರಿಸುವವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.