ETV Bharat / city

ಮಹಾಲಕ್ಷ್ಮಿ ಬ್ಯಾಂಕ್​ನಲ್ಲಿ 3.5 ಕೆಜಿ ಚಿನ್ನಾಭರಣ ಕಳ್ಳತನ ಕೇಸ್: ನಾಲ್ವರು ಅರೆಸ್ಟ್, 2.8 ಕೆಜಿ ಚಿನ್ನಾಭರಣ ವಶ - ಬ್ಯಾಂಕ್ ಕಳ್ಳರ ಬಂಧನ

ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿರುವ ಮಹಾಲಕ್ಷ್ಮಿ ಸೊಸೈಟಿಯಲ್ಲಿ 3.5 ಕೆಜಿ ಚಿನ್ನಾಭರಣ ದೋಚಿದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾಲಕ್ಷ್ಮೀ ಬ್ಯಾಂಕ್​ ಕಳ್ಳತನ
ಮಹಾಲಕ್ಷ್ಮೀ ಬ್ಯಾಂಕ್​ ಕಳ್ಳತನ
author img

By

Published : Jun 25, 2022, 9:37 AM IST

Updated : Jun 25, 2022, 1:25 PM IST

ಬೆಳಗಾವಿ: ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಮಹಾಲಕ್ಷ್ಮಿ ಸೊಸೈಟಿಗೆ ನುಗ್ಗಿ ಒಟ್ಟು 3.5ಕೆಜಿ ಚಿನ್ನಾಭರಣ ಕಳವು ಮಾಡಿದ್ದ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಹಾರೋಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಹುಸೇನ್ ಜಾತಗಾರ (40), ಮೂಡಲಗಿಯ ಸದ್ದಾಂ ಜಮಖಂಡಿ (22), ರಿಯಾಜ್ ಪೈಲ್ವಾನ್ (23), ಅಥಣಿ ತಾಲೂಕಿನ ಉಗಾರದ ಹಾಜೀಸಾಬ್ ಶೇಖ್ (36) ಬಂಧಿತ ಆರೋಪಿಗಳು.

ಕಳೆದ ಮೇ 28ರಂದು ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿರುವ ಮಹಾಲಕ್ಷ್ಮಿ ಸೊಸೈಟಿಯಲ್ಲಿ ನಾಲ್ವರು ಖದೀಮರು 3.5 ಕೆಜಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಈ ಕುರಿತು ಮೇ 29ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖದೀಮರ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು, ಸದ್ಯ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ 1.40 ಕೋಟಿ ಮೌಲ್ಯದ 2.8 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಎಸ್​ಪಿ ಹೇಳಿಕೆ

ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಮಹಾಲಕ್ಷ್ಮಿ ಸೊಸೈಟಿಯಲ್ಲಿ 3.5 ಕೆಜಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. 25 ದಿನಗಳಿಂದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಇದೀಗ ನಾಲ್ವರನ್ನು ಬಂಧಿಸಿದ್ದೇವೆ. 2.8 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದೇವೆ. ಇನ್ನೂ ಓರ್ವ ನಾಪತ್ತೆಯಾಗಿದ್ದು, ಆತನಿಂದ ಇನ್ನಷ್ಟು ಚಿನ್ನಾಭರಣ ವಶಪಡಿಸಿಕೊಳ್ಳುತ್ತೇವೆ.

ಹಾರೂಗೇರಿ, ಮೂಡಲಗಿ, ಅಥಣಿ, ಕುಡಚಿ ಪೊಲೀಸರ ನಾಲ್ಕು ತಂಡಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ‌. ಈ ಪ್ರಕರಣ ತುಂಬಾ ಮುಖ್ಯವಾಗಿತ್ತು. ಏಕೆಂದ್ರೆ ಕಷ್ಟಪಟ್ಟು ದುಡಿದ ರೈತರ, ಬಡವರ ಚಿನ್ನಾಭರಣಗಳು ಈ ಬ್ಯಾಂಕ್​ನಲ್ಲಿದ್ದವು ಎಂದು ತಿಳಿಸಿದರು.

(ಇದನ್ನೂ ಓದಿ: ರಸ್ತೆ ಮಧ್ಯೆ ಹೊತ್ತಿ ಉರಿದ ಸ್ಕೂಟರ್​: ಒಬ್ಬನ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ)

Last Updated : Jun 25, 2022, 1:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.