ETV Bharat / city

ಲಾಕ್ ಡೌನ್ ಹಿನ್ನೆಲೆ, ಝುಂಜರವಾಡ ಅಪ್ಪಯ್ಯ ಸ್ವಾಮಿ ಜಾತ್ರೆ ರದ್ದು..! - ಕೊರೊನಾ ವೈರಸ್ ಹಿನ್ನೆಲೆ

ಕೊರೊನಾ ವೈರಸ್ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ತಾಲೂಕಿನ ಝುಂಜರವಾಡ ಗ್ರಾಮದ ಪರಂಪರೆ ಅಪ್ಪಯ್ಯ ಸ್ವಾಮಿ ಜಾತ್ರೆ ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Lockdown effect Junjarawada Appayya Swami Fair canceled
ಲಾಕ್ ಡೌನ್ ಹಿನ್ನೆಲೆ, ಝುಂಜರವಾಡ ಅಪ್ಪಯ್ಯ ಸ್ವಾಮಿ ಜಾತ್ರೆ ರದ್ದು..!
author img

By

Published : May 6, 2020, 10:08 PM IST

ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ತಾಲೂಕಿನ ಝುಂಜರವಾಡ ಗ್ರಾಮದ ಪರಂಪರೆ ಅಪ್ಪಯ್ಯ ಸ್ವಾಮಿ ಜಾತ್ರೆ ರದ್ದು ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ವರ್ಷ ಬುದ್ಧ ಪೂರ್ಣಿಮಾ ಹುಣ್ಣಿಮೆಯಂದು ಅತಿ ವಿಜೃಂಭಣೆಯಿಂದ ಶ್ರೀ ಅಪ್ಪಯ್ಯ ಸ್ವಾಮಿಜಿ ಜಾತ್ರೆ ನಡೆಯುತ್ತಿತ್ತು. ಆದರೆ ಈ ವರ್ಷ ಕೋವಿಡ್-19 ಲಾಕ್​ಡೌನ್​​ ಹಿನ್ನೆಲೆಯಲ್ಲಿ ರಥೋತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಝುಂಜರವಾಡ ಗ್ರಾಮದ ಹಿರಿಯರು ತಿಳಿಸಿದ್ದಾರೆ.

ಹೊಳೆ ಬಬಲಾದಿ ಕಾಲಜ್ಞಾನಿ ಸದಾಶಿವ ಸ್ವಾಮೀಜಿ ಅವರ ಶಾಖಾಮಠ ಝುಂಜರವಾಡ ಗ್ರಾಮದ ಅಪ್ಪಯ್ಯ ಸ್ವಾಮೀಜಿ ಜಾತ್ರೆ ಲಾಕ್ ಡೌನ್ ಆದೇಶದಂತೆ‌ ರದ್ದು ಮಾಡಲಾಗಿದೆ. ಮುಂದಿನ ದಿನಾಂಕವನ್ನು ಸರ್ಕಾರದ ನಿರ್ದೇಶನಗಳ ಅನುಸಾರ ನಿರ್ಧರಿಸಿ, ತಿಳಿಸಲಾಗುವುದು ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.