ETV Bharat / city

ಪರಿಷತ್ ಚುನಾವಣೆ : ಬೆಳಗಾವಿ, ವಿಜಯಪುರದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ - ವಿಧಾನ ಪರಿಷತ್ ದ್ವಿಸದಸ್ಯತ್ವ ಚುನಾವಣೆ

ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಇಂದು ಬೆಳಗಾವಿ ಮತ್ತು ವಿಜಯಪುರದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ವಿಜಯಪುರದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಪಿ ಹೆಚ್ ಪೂಜಾರ ನಾಮಪತ್ರ ಸಲ್ಲಿಸಿದರೆ, ಇತ್ತ ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಾಗಪ್ಪ ಚಿಕ್ಕನರಗುಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ..

ಬೆಳಗಾವಿ, ವಿಜಯಪುರದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

author img

By

Published : Nov 20, 2021, 7:31 PM IST

ವಿಜಯಪುರ : ವಿಧಾನ ಪರಿಷತ್ ದ್ವಿಸದಸ್ಯತ್ವ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿ ಬಾಗಲಕೋಟೆಯ ಬಿಜೆಪಿ ಪಕ್ಷದ ಹಿರಿಯ ಮುಖಂಡ ಪಿ ಹೆಚ್ ಪೂಜಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ನಿನ್ನೆಯಷ್ಟೇ ಬಿಜೆಪಿ ಹೈಕಮಾಂಡ್ ಪಿ ಹೆಚ್ ಪೂಜಾರಿ ಅವರನ್ನು ದ್ವಿಸದಸ್ಯತ್ವ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡುತ್ತಿರುವುದನ್ನು ಖಚಿತಪಡಿಸಿದರು.

ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗೆ ಮೀಸಲಾಗಿರುವ ಎರಡು ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.‌ ಈಗಾಗಲೇ ಒಂದು ಸ್ಥಾನಕ್ಕೆ ಪಿ ಹೆಚ್ ಪೂಜಾರ ಅವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಉಳಿದ ಇನ್ನೊಂದು ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಡೌಟ್ ಇದೆ.

ಮತ ವಿಭಜನೆಯಿಂದ ಇದ್ದ ಒಂದು ಸ್ಥಾನವನ್ನು ಸಹ ಕಳೆದುಕೊಳ್ಳಬಾರದು ಎನ್ನುವ ದೂರದ ದೃಷ್ಟಿ ಕಾರಣ ಸದ್ಯ ಒಬ್ಬರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ನಡೆ ನೋಡಿಕೊಂಡು ಮುಂದಿನ ದಾಳ ಉರುಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ.

ಬೆಳಗಾವಿಯಲ್ಲಿ ಮೊದಲ ನಾಮಪತ್ರ : ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಇಂದು ಬೆಳಗಾವಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ರಾಮದುರ್ಗ ತಾಲೂಕಿನ ಲಖನಾಯಕನಕೊಪ್ಪ ಗ್ರಾಮದ ಸಂಗಮೇಶ ನಾಗಪ್ಪ ಚಿಕ್ಕನರಗುಂದ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣೆ ಅಧಿಕಾರಿ ವೆಂಕಟೇಶ್​​ ಕುಮಾರ್ ಅವರಿಗೆ ಸಂಗಮೇಶ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ಚನ್ನರಾಜ್ ಹಟ್ಟಿಹೊಳಿ ಹೆಸರನ್ನು ಅಂತಿಮಗೊಳಿಸಿದ್ದು, ಘೋಷಣೆ ಬಾಕಿಯಿದೆ. ಲಖನ್ ಜಾರಕಿಹೊಳಿ‌ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಮೂವರು ನ.23ರಂದು ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.