ಚಿಕ್ಕೋಡಿ: ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ ಪರ ವಕೀಲ ಬಿ.ಡಿ. ಪಾಟೀಲ್ ಆನ್‌ಲೈನ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಚಿಕ್ಕೋಡಿಯ ಮೊದಲ ಜೆಎಂಎಫ್ಸಿ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇಂದು ಷರತ್ತುಬದ್ಧ ಜಾಮೀನು ಸಿಗುವ ನಿರೀಕ್ಷೆಯಲ್ಲಿ ಸಚಿನ್ ಪರ ವಕೀಲರು ಇದ್ದಾರೆ. ಮಧ್ಯಾಹ್ನದ ಬಳಿಕ ಬೇಲ್ ಸಿಕ್ಕರೆ ಇವತ್ತೇ ಜೈಲಿನಿಂದ ಸಚಿನ್ ಸಾವಂತ್ ಬಿಡುಗಡೆಯಾಗಲಿದ್ದಾರೆ.
ಇನ್ನು, ಯೋಧನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದ್ದು. ಏ.23 ರಂದು ಪೊಲೀಸರು ಹಾಗೂ ಯೋಧನ ನಡುವೆ ಗಲಾಟೆಗೆ ನಡೆದಿತ್ತು.