ಬೆಳಗಾವಿ: ನೆರೆ ಸಂತ್ರಸ್ತರ ಜತೆ ಬಿಸಿಲಲ್ಲಿ ಕುಳಿತ ಮಗನ ಬೆವರನ್ನು ತಮ್ಮ ಸೆರಗಿನಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒರೆಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
ಡಿಸಿ ಕಚೇರಿ ಎದುರು ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲೆಯ ಗ್ರಾಮೀಣ ಭಾಗದ ನೆರೆ ಸಂತ್ರಸ್ತರಿಂದ ಪ್ರತಿಭಟನೆ ರ್ಯಾಲಿ ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಹೀಗಾಗಿ ಕ್ಷೇತ್ರದ ಜನರ ಜತೆ ಮೃನಾಳ್ ಹೆಬ್ಬಾಳ್ಕರ್ ತಾಯಿಗಾಗಿ ಡಿಸಿ ಕಚೇರಿ ಎದುರು ಕಾಯ್ದು ಕುಳಿತಿದ್ದರು.
ವಿಮಾನ ತಡವಾಗಿದಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಗಳೂರಿನಿಂದ ಆಗಮಿಸಲು ವಿಳಂಬವಾಯಿತು. ಹೀಗಾಗಿ ಮಧ್ಯಾಹ್ನ 2.30ರವರೆಗೆ ಲಕ್ಷ್ಮಿ ಹೆಬ್ಬಾಳ್ಕರ್‌ಗಾಗಿ ಸಂತ್ರಸ್ತರ ಜತೆಗೆ ಮೃನಾಳ್ ಕಾಯ್ದು ಕುಳಿತಿದ್ದರು. ನೇರವಾಗಿ ಡಿಸಿ ಕಚೇರಿಗೆ ಆಗಮಿಸಿದ ಹೆಬ್ಬಾಳ್ಕರ್, ನೆರೆ ಸಂತ್ರಸ್ತರ ಜತೆ ಬಿಸಿಲಿನಲ್ಲಿ ಕುಳಿತು ಬೆವತಿದ್ದ ಮಗನ ಬೆವರನ್ನು ತಮ್ಮ ಸೆರಗಿನಿಂದ ಒರೆಸಿ ತಾಯಿ ಮಮತೆ ತೋರಿದರು.