ETV Bharat / city

ರೆಮ್ಡೆಸಿವರ್ ಹಂಚಿಕೆಯಲ್ಲಿ ಬೆಳಗಾವಿಗೆ ಭಾರಿ ತಾರತಮ್ಯ: ಸರ್ಕಾರದ ವಿರುದ್ಧ ಹೆಬ್ಬಾಳ್ಕರ್ ಆಕ್ರೋಶ

ಬೆಳಗಾವಿ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ 2,700 ಇಂಜಕ್ಷನ್ ಬೇಕಾಗುತ್ತದೆ. ಆದರೆ 3 ದಿನ ಸೇರಿ ಕೇವಲ 400 ಹಂಚಿಕೆಯಾಗಿದೆ

Lakshmi Hebbalkar
Lakshmi Hebbalkar
author img

By

Published : May 8, 2021, 3:35 PM IST

ಬೆಳಗಾವಿ: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್ಡೆಸಿವಿರ್​ ಚುಚ್ಚುಮದ್ದು ಹಂಚಿಕೆಯಲ್ಲಿ ಜಿಲ್ಲೆಗೆ ಭಾರಿ ತಾರತಮ್ಯ ಮಾಡಲಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಶುಕ್ರವಾರ ರಾಜ್ಯಕ್ಕೆ ಒಟ್ಟು 40 ಸಾವಿರ ರೆಮ್ಡೆಸಿವಿರ್​ ಇಂಜಕ್ಷನ್ ಹಂಚಿಕೆಯಾಗಿದ್ದರೂ ಬೆಳಗಾವಿ ಜಿಲ್ಲೆಗೆ ಕಳೆದ 3 ದಿನಕ್ಕೆ ಕೇವಲ 400 ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ 2,700 ಇಂಜಕ್ಷನ್ ಬೇಕಾಗುತ್ತದೆ. ಆದರೆ 3 ದಿನ ಸೇರಿ ಕೇವಲ 400 ಹಂಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ದೊಡ್ಡದಾದ ಜಿಲ್ಲೆ. ಇಲ್ಲಿ ಸರಾಸರಿ 900ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಜನರಿಗೆ ಇಂಜಕ್ಷನ್ ಅಗತ್ಯವೆಂದು ಪರಿಗಣಿಸಿದರೂ, 450 ಜನರಿಗೆ ತಲಾ 6ರಂತೆ 2,700 ಇಂಜಕ್ಷನ್ ಬೇಕಾಗುತ್ತದೆ. ಆದರೆ 3 ದಿನ ಸೇರಿ 400 ಹಂಚಿಕೆ ಮಾಡಿದರೆ ಯಾವುದಕ್ಕೆ ಸಾಕಾಗುತ್ತದೆ? ಇಂಜಕ್ಷನ್ ಸಿಗದೇ ಜನ ಸಾಯುತ್ತಿದ್ದಾರೆ. ಬೆಳಗಾವಿಗೆ ಬೇರೆ ಜಿಲ್ಲೆಗಳಿಗಿಂತ ಹೆಚ್ಚು ಪೂರೈಸುವ ಬದಲು ಕಡಿಮೆ ಪೂರೈಸಲಾಗುತ್ತಿದೆ. ಈ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳ್ಕರ್​​ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​​ ಹೆಲ್ಪ್​ಲೈನ್​ ಸ್ಥಗಿತ: ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ನೂತನ ಸಂಸದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.