ETV Bharat / city

ಮುರುಗೇಶ್ ನಿರಾಣಿ ರಾಜೀನಾಮೆಗೆ ಕ್ಷತ್ರಿಯ ಸಮಾಜದ ಒತ್ತಾಯ

ಹಿಂದೂ ದೇವರ ಅವಹೇಳನ ಮಾಡಿರುವ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದರಷ್ಟೇ ಸಾಲದು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಥಣಿ ಕ್ಷತ್ರಿಯ ಸಮಾಜ ಯುವಕರು ಆಗ್ರಹಿಸಿದ್ದಾರೆ.

Kshatriya society demands resignation of Murugesh Nirani
ಹಿಂದೂ ದೇವರ ಅವಹೇಳನ..ಮುರುಗೇಶ್ ನಿರಾಣಿ ರಾಜೀನಾಮೆಗೆ ಕ್ಷತ್ರಿಯ ಸಮಾಜದ ಒತ್ತಾಯ
author img

By

Published : Jul 23, 2020, 4:39 PM IST

ಅಥಣಿ: ಹಿಂದೂ ದೇವರ ಅವಹೇಳನ ಮಾಡಿರುವ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಕ್ಷಮೆಯಾಚಿಸಿದರಷ್ಟೇ ಸಾಲದು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅಥಣಿ ಕ್ಷತ್ರಿಯ ಸಮಾಜ ಯುವಕರು ತಹಶೀಲ್ದಾರ್​ ದುಂಡಪ್ಪ ಕೋಮಾರ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಹಿಂದೂ ದೇವರ ಅವಹೇಳನ..ಮುರುಗೇಶ್ ನಿರಾಣಿ ರಾಜೀನಾಮೆಗೆ ಕ್ಷತ್ರಿಯ ಸಮಾಜದ ಒತ್ತಾಯ

ಈ ವೇಳೆ ಮಾತನಾಡಿದ ಕ್ಷತ್ರಿಯ ಯುವ ಬ್ರಿಗೇಡ್ ಜಿಲ್ಲಾ ಮುಖಂಡ ಸಂತೋಷ ನಾಯಕ, ಹಿಂದೂ ಧರ್ಮದ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರ, ಶ್ರೀ ಕೃಷ್ಣ, ಶಿವ, ವಿಷ್ಣು, ಸೂರ್ಯದೇವರನ್ನು ದೇವರೇ ಅಲ್ಲ ಎಂದಿರುವ ಶಾಸಕ ಮುರುಗೇಶ್ ನಿರಾಣಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ.

ಕ್ಷಮೆಯಾಚಿಸಿದರಷ್ಟೇ ಸಾಲದು. ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜಿನಾಮೆ ನೀಡದಿದ್ದರೆ, ಕ್ಷತ್ರಿಯ ಸಮಾಜದ ವತಿಯಿಂದ ದೇಶಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.