ETV Bharat / city

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೆಸರುಗದ್ದೆ ಕ್ರಿಡಾಕೂಟದಲ್ಲಿ ಮಿಂದೆದ್ದ ಯುವ ಸಮೂಹ

ಆನ್​ಲೈನ್​ ಆಟದ ಗುಂಗಿನಲ್ಲಿ ಮೈಮರೆತಿದ್ದ ಯುವಕರು ಇಂದು ಕೆಸರು ಗದ್ದೆಗೆ ಇಳಿದು ದೇಶೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡರು.

krishna-janmashtami
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೆಸರುಗದ್ದೆಯ ಕ್ರಿಡಾಕೂಟದಲ್ಲಿ ಮಿಂದೆದ್ದ ಯುವ ಸಮೂಹ
author img

By

Published : Aug 21, 2022, 7:24 PM IST

ಬೆಳಗಾವಿ : ಯುವಕರ ಕೈಯಲ್ಲಿ ಮೊಬೈಲ್ ಬಂದು ದೇಶಿ ಕ್ರೀಡೆಗಳು ಕಣ್ಮರೆ ಆಗುತ್ತಿರುವ ದಿನಗಳಲ್ಲಿ ಕುಂದಾನಗರಿಯ ಯುವ ಸಮೂಹ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ಮೊಸರಿನ ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜಿಸಿದರು. ಅಷ್ಡೇ ಅಲ್ಲದೇ ತಮ್ಮ ಬಾಲ್ಯದ ನೆನಪುಗಳನ್ನ ಮೆಲುಕು ಹಾಕಿದರು.

ನಗರದ ಶಾಸಕ ಅಭಯ್ ಪಾಟೀಲ್ ಅವರ ಫಾರ್ಮ್ ಹೌಸ್ ಬಳಿಯ ಮಹಲ್​ನಲ್ಲಿ ಅಭಯ್ ಪಾಟೀಲ ಮುಂದಾಳತ್ವದಲ್ಲಿ ಕೆಸರು ಗದ್ದೆ ಓಟ, ಮೊಸರಿನ‌ ಗಡಿಗೆ ಒಡೆಯುವ ಸ್ಪರ್ಧೆ ಹೀಗೆ ವಿವಿಧ ದೇಶೀಯ ಕ್ರೀಡೆಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವು ಯುವಕರು-ಯುವತಿಯರು ಉತ್ಸುಕತೆಯಿಂದ ಭಾಗಿಯಾದರು. ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರಿನ ಗಡಗಿ ಒಡೆಯುವ ಸ್ಪರ್ಧೆ ಗಮನ ಸೆಳೆಯುವಂತಿತ್ತು. ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡ ಯುವ ಸಮೂಹ ಖುಷಿಪಟ್ಟರು.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೆಸರುಗದ್ದೆಯ ಕ್ರಿಡಾಕೂಟದಲ್ಲಿ ಮಿಂದೆದ್ದ ಯುವ ಸಮೂಹ

ಈ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ, ಕೋವಿಡ್ ಕಾರಣಕ್ಕೆ ಎರಡು ವರ್ಷ ಈ ಕ್ರೀಡೆಯನ್ನು ನಡೆಸಿರಲಿಲ್ಲ‌. ಈ ವರ್ಷ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು ಎಂದರು.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ್, ಕಳೆದ 12 ವರ್ಷಗಳಿಂದ ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇಶಿ ಕ್ರೀಡೆ ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇದು ಎಲ್ಲೆಡೆ ಪಸರಿಸಬೇಕು ಎಂದು ಬೆಳಗಾವಿ ಉತ್ತರ ಶಾಸಕ ಅನೀಲ್ ಬೆನಕೆ ಹೇಳಿದರು.

ಇದನ್ನೂ ಓದಿ : ಬೆಂಗಳೂರಲ್ಲಿ ಗಣೇಶೋತ್ಸವದ ಅನುಮತಿಗೆ 63 ಏಕಗವಾಕ್ಷಿ ಕೇಂದ್ರ.. ಪಿಒಪಿ ಗಣೇಶ ಮೂರ್ತಿ ತಯಾರಿಕೆ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.