ETV Bharat / city

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ : ಒಳ್ಳೆಯದಾಗಲಿ ಎಂದ‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ - Dk shivarajkumar on yatnal

ಪ್ರಮೋದ್ ಮಧ್ವರಾಜ್ ಇವತ್ತು ರಾಜೀನಾಮೆ ಕಳಿಸಿಕೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರು ಕಳೆದ ಆರು ತಿಂಗಳ ಹಿಂದೆಯೇ ನನಗೆ ರಾಜೀನಾಮೆ ವಿಚಾರವನ್ನು ತಿಳಿಸಿದ್ದರು‌ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ..

kpcc-president-dks-on-pramod-madvaraj-resignation
ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ: ಒಳ್ಳೆಯದಾಗಲಿ ಎಂದ‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ
author img

By

Published : May 7, 2022, 8:01 PM IST

ಬೆಳಗಾವಿ : ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪ್ರಮೋದ್ ಮಧ್ವರಾಜ್‌ಗೆ ಒಳ್ಳೆಯದಾಗಲಿ. ಪ್ರಮೋದ್ ಮಧ್ವರಾಜ್ ಅವರು ಕಳೆದ ಆರು ತಿಂಗಳ ಹಿಂದೆಯೇ ನನಗೆ ರಾಜೀನಾಮೆ ವಿಚಾರವನ್ನು ತಿಳಿಸಿದ್ದರು‌. ಆಗ ಅವರ ನೋವು, ಅವರ ದುಗುಡ ತಿಳಿಸಿದ್ದರು. ಅವರಿಗೇನೋ ಕೌನ್ಸಿಲ್ ಸೀಟ್ ಕೊಡ್ತೀವಿ ಎಂದು ಆಶ್ವಾಸನೆ ನೀಡಿದ್ದಾರಂತೆ ಎಂದು ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಡಿಕೆಶಿ, ಪ್ರಮೋದ್ ಮಧ್ವರಾಜ್ ಇವತ್ತು ರಾಜೀನಾಮೆ ಕಳಿಸಿಕೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿಕೆಶಿ‌ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ಗೆ ಬಿಜೆಪಿ ನಾಯಕರು ಬರ್ತಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾನು ಬೇರೆಯವರ ತರಹ ಬಹಿರಂಗಪಡಿಸೋಕೆ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರಗಳಲ್ಲಿ ಕೈ ಗೆಲುವು : ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣೆ‌ ಘೋಷಣೆಯಾಗಲಿದೆ. ಅದಕ್ಕಾಗಿ ಪೂರ್ವಭಾವಿ ಸಭೆ ಮಾಡುತ್ತಿದ್ದೇವೆ. ಈಗಾಗಲೇ ದೆಹಲಿಯ ವರಿಷ್ಠರು ನಮ್ಮ ಶಿಫಾರಸ್ಸಿನ ಮೇರೆಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಒಬ್ಬ ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಶಿಕ್ಷಕರ ಕ್ಷೇತ್ರಕ್ಕೆ ಆಯ್ಕೆ ಮಾಡಿದ್ದೇವೆ. ಸುನೀಲ್ ಸಂಕ್ ಅವರಿಗೆ ಪದವೀಧರ ಕ್ಷೇತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಇಡೀ ಪಕ್ಷ ಅವರ ಪರವಾಗಿ ನಿಂತು ಎಲೆಕ್ಷನ್ ಮಾಡುತ್ತೇವೆ ಎಂದರು. ಬಿಜೆಪಿಯಲ್ಲಿ ಶಿಕ್ಷಕರ ಕ್ಷೇತ್ರ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. ನಾನದನ್ನ ಬಿಡಿಸಿ ಮಾತನಾಡಲು ಹೋಗುವುದಿಲ್ಲ. ಎರಡೂ ಕ್ಷೇತ್ರದಲ್ಲಿ ನಾವು ಗೆಲ್ತೀವಿ ಎಂಬ ವಿಶ್ವಾಸ ಇದೆ ಎಂದು ಡಿಕೆಶಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಇಡಿ, ಸಿಬಿಐ, ಐಟಿ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು : ಶಿಕ್ಷಕರ ನೇಮಕಾತಿ, ಪಿಎಸ್ಐ, ಕೆಪಿಎಸ್‌ಸಿ, ಇಂಜಿನಿಯರ್ ಎಲ್ಲರ ಆಯ್ಕೆ ವಿಚಾರದಲ್ಲಿ ಭ್ರಷ್ಟಾಚಾರವಿದೆ. ಎಂದಿಗೂ ರಾಜ್ಯದಲ್ಲಿ ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರಲಿಲ್ಲ. ಈಗ ನಡೀತಿದೆ. ಪೋಸ್ಟಿಂಗ್‌ಗೆ ಇಷ್ಟಿಷ್ಟು ಬೆಲೆ ಅಂತಾ ತನಿಖೆ ಮಾಡಿ ಮಾಧ್ಯಮದವರು ಹೇಳಿದರು. ಸಿಎಂ, ಮಂತ್ರಿ ಸ್ಥಾನಕ್ಕೂ ಬೆಲೆ ಫಿಕ್ಸ್ ಆಗಿದೆ. ಒಬ್ಬ ಆಡಳಿತ ಪಕ್ಷದ ನಾಯಕ ಇದನ್ನು‌ ತಿಳಿಸಿದ್ದಾರೆ. ಇಡಿ, ಸಿಬಿಐ, ಐಟಿಯವರು ಸುಮೋಟೋ ಕೇಸ್ ತಗೋಬೇಕು. ಸರ್ಕಾರದವರು ಇದನ್ನು ವೈಯಕ್ತಿಕ ಹೇಳಿಕೆ ಅಂತಾರೆ. ಹಿಂದೆ ಏನು ಹೇಳಿಕೆ ಕೊಟ್ಟಿದ್ದರೋ ಎಲ್ಲದಕ್ಕೂ ಸಮರ್ಥಿಸಿಕೊಂಡಿದ್ದಾರೆ ಎಂದರು.

ಯಡಿಯೂರಪ್ಪ ಸರ್ಕಾರದಲ್ಲಿ ಬಿಎಸ್‌ವೈ, ವಿಜಯೇಂದ್ರ, ನಿರಾಣಿ ಬೇರೆ ಮಂತ್ರಿ ಬಗ್ಗೆ ಹೇಳಿದ್ದು ಸಮರ್ಥಿಸಿಕೊಂಡಿದ್ದರು. ಈಗ ಅವರ ಪಕ್ಷದ ಅಧ್ಯಕ್ಷರು ವೈಯಕ್ತಿಕ ಅಂತಾ ಹೇಳೋಕೆ ಸಾಧ್ಯ ಆಗೋದಿಲ್ಲ. ಇದು ಮಾಜಿ ಕೇಂದ್ರದ ಮಂತ್ರಿ, ನಿಮ್ಮ ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ. ಸಿಎಂ, ಮಂತ್ರಿ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ‌ ಮಾಡಿದ್ದಾರೆ. ಹೀಗಾಗಿ, ಈ ಸಂದರ್ಭದಲ್ಲಿ ಐಟಿ, ಇಡಿ ಸಿಬಿಐ ಸುಮೋಟೋ ಕೇಸ್ ತೆಗೆದುಕೊಳ್ಳಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ : ನಾನು ಬಿಜೆಪಿ ನಾಯಕರ ಮನೆಗೆ ಹೋಗಿ ಐಟಿ, ಇಡಿಯಿಂದ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದೇನೆ ಎಂದು ಯತ್ನಾಳ್ ಹೇಳಿದ್ದಾನೆ. 102 ಕೋಟಿ ರೂಪಾಯಿ ಮಾನನಷ್ಟ ಕೇಸ್ ಹಾಕಿದ್ದೇ‌ನೆ. 1 ಲಕ್ಷ ‌ರೂಪಾಯಿ ಹಣ ಕಟ್ಟಿ ಕೇಸ್ ಹಾಕಿದ್ದೇನೆ. ಯತ್ನಾಳ್ ಅಂತವರನ್ನು ಅನೇಕರನ್ನು ನೋಡಿದ್ದೇನೆ. 2500 ಕೋಟಿ ರೂಪಾಯಿ ಸಿಎಂ ಮಾಡಲು ಹಣ ಕೇಳಿದ್ದರು ಎಂದು ಯತ್ನಾಳ್ ಹೇಳಿದ್ದಾರೆ. ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಯತ್ನಾಳ್ ವಶಕ್ಕೆ ಪಡೆದು ಮಾಹಿತಿ ಪಡೆಯಬೇಕು ಎಂದು ಡಿಕೆಶಿ ಒತ್ತಾಯ ಮಾಡಿದರು.

'ಆಸ್ತಿ-ಪಾಸ್ತಿ ಜಪ್ತಿ ಮಾಡಲು ವ್ಯವಸ್ಥೆ ಮಾಡಿ': ರಮೇಶ್ ಜಾರಕಿಹೊಳಿ‌ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅಪೆಕ್ಸ್ ಬ್ಯಾಂಕ್​​ನವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 600 ಕೋಟಿಗೂ ಅಧಿಕ ಹಣ ಬ್ಯಾಂಕ್‌ಗೆ ಬೆಳಗಾವಿ ಜಿಲ್ಲೆಯ ಮಾಜಿ ಮಂತ್ರಿ ಕಟ್ಟಬೇಕು. ಡಿಸಿಗೆ ಪತ್ರ ಬರೆದು ಎರಡು ವರ್ಷ ಆದ್ರೂ ಏನೂ ಕ್ರಮ ಕೈಗೊಂಡಿಲ್ಲ. ರೈತರಿಗೆ ಐವತ್ತು ಕೋಟಿ ರೂಪಾಯಿ ಕೊಡಬೇಕು. ಇದನ್ನು ಕೊಡಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಮುಖ್ಯಮಂತ್ರಿಗೆ ಗೊತ್ತಿದ್ದರೂ ಏನೂ ಮಾಡುತ್ತಿಲ್ಲ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಸಹಕಾರಿ ಸಚಿವರು ಅಪೆಕ್ಸ್ ಬ್ಯಾಂಕ್​​ನಿಂದ ಒಂದು ಖಾತೆ ಬರೆಯಿಸಿಬಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಒಂದು ಸಣ್ಣ ಸೊಸೈಟಿಯಲ್ಲಿ ಇಪ್ಪತ್ತು ಕೋಟಿ ದಿವಾಳಿ ಅಂತಾ ಹಾಕಿಕೊಂಡು ಕುಳಿತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೇನಾಮಿ ಹೆಸರಲ್ಲಿ ಇಸ್ಕೊಂಡು ಈಗ ಇವರೇ ಕಾರ್ಖಾನೆ ನಡೆಸುವ ಕೆಲಸ ಆಗ್ತಿದೆ. ಕೂಡಲೇ ಮುಖ್ಯಮಂತ್ರಿ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಕೇಂದ್ರ ಸಚಿವರಿಗೂ ಈ ವಿಚಾರವನ್ನು ತಿಳಿಸಬೇಕು. ಹಣ ವಸೂಲಿ ಮಾಡಿಕೊಳ್ಳಲು ಆಸ್ತಿ-ಪಾಸ್ತಿ ಜಪ್ತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ರಕ್ಷಣೆ ಕೊಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ಗೆ​​ ರಾಜೀನಾಮೆ ನೀಡಿದ ಮಾಜಿ ಶಾಸಕ: ಬಿಜೆಪಿಗೆ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.