ಚಿಕ್ಕೋಡಿ (ಬೆಳಗಾವಿ): ಗಾಯರಾಣ ಜಮೀನಿನಲ್ಲಿರುವ ಮನೆಗಳ ತೆರವಿಗೆ ಸರ್ಕಾರ ಆದೇಶ ನೀಡಿದೆ. ಈ ಆದೇಶ ಖಂಡಿಸಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣ ನಿವಾಸಿಗಳು ಸ್ವಯಂ ಪ್ರೇರಿತ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು.
ಕಳೆದ 40 ವರ್ಷಗಳಿಂದ ಕಂಕಣವಾಡಿ ಗ್ರಾಮದ ಗಾಯರಾಣ ಜಮೀನಿನಲ್ಲಿ ವಾಸವಿದ್ದ 2,000 ಕುಟುಂಬಗಳಿಗೆ ಸರ್ಕಾರನೇ ಮೂಲಭೂತ ಸೌಕರ್ಯಗಳನ್ನು ನೀಡಿ, ಆಶ್ರಯ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಟ್ಟಿತ್ತು. ಆದರೆ, ಇದೀಗ ಏಕಾಏಕಿ ಗಾಯರಾಣ ಜಮೀನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ.
ಹೀಗಾಗಿ ಕಂಕಣವಾಡಿ ಪಟ್ಟಣದ ಶೇ.75ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿದ್ದು, ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.