ETV Bharat / city

ಲಖನ್​ಗೆ ಪರೋಕ್ಷ ಬೆಂಬಲ.. ರಮೇಶ್ ಜಾರಕಿಹೊಳಿ‌ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ವರಿಷ್ಠರ ಚಿಂತನೆ!? - ರಮೇಶ್ ಜಾರಕಿಹೊಳಿ‌ ವಿರುದ್ಧ ಶಿಸ್ತು ಕ್ರಮ

ಮೊದಲ ಮತ ಬಿಜೆಪಿಗೆ ಎರಡನೇ ಮತ ಕಾಂಗ್ರೆಸ್ ಸೋಲಿಸಲು ಎಂದು ರಮೇಶ್ ಬಹಿರಂಗ ಹೇಳಿಕೆ ನೀಡಿದ್ದರು. ಆ ಮೂಲಕ ಪರೋಕ್ಷವಾಗಿ ಲಖನ್ ಜಾರಕಿಹೊಳಿ ಪರ ಮತಯಾಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಜಾರಕಿಹೊಳಿ‌ ನಡೆ ಬಿಜೆಪಿ ಅಭ್ಯರ್ಥಿಯ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ರಮೇಶ್ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ..

Jarkiholi brothers went to temple
ದೇವಸ್ಥಾನಗಳಿಗೆ ಜಾರಕಿಹೊಳಿ ಸಹೋದರರ ಭೇಟಿ
author img

By

Published : Nov 27, 2021, 4:11 PM IST

ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿರುವ ಸಹೋದರ ಲಖನ್ ಜಾರಕಿಹೊಳಿ‌ಗೆ ಪರೋಕ್ಷ ಬೆಂಬಲ ನೀಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ವಿರುದ್ಧ ಶಿಸ್ತುಕ್ರಮಕ್ಕೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ದೇವಸ್ಥಾನಗಳಿಗೆ ಜಾರಕಿಹೊಳಿ ಸಹೋದರರ ಭೇಟಿ

ಮೊದಲ ಮತ ಬಿಜೆಪಿಗೆ ಎರಡನೇ ಮತ ಕಾಂಗ್ರೆಸ್ ಸೋಲಿಸಲು ಎಂದು ರಮೇಶ್ ಬಹಿರಂಗ ಹೇಳಿಕೆ ನೀಡಿದ್ದರು. ಆ ಮೂಲಕ ಪರೋಕ್ಷವಾಗಿ ಲಖನ್ ಜಾರಕಿಹೊಳಿ ಪರ ಮತಯಾಚನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ‌ ನಡೆ ಬಿಜೆಪಿ ಅಭ್ಯರ್ಥಿಯ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಬಿಜೆಪಿ ನಾಯಕರು ರಮೇಶ್ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಾರಕಿಹೊಳಿ ಬ್ರದರ್ಸ್ ಟೆಂಪಲ್ ರನ್ : ಚುನಾವಣಾ ಪ್ರಚಾರದ ಜೊತೆ ಜಾರಕಿಹೊಳಿ ಬ್ರದರ್ಸ್ ಟೆಂಪಲ್ ರನ್ ನಡೆಸಿದ್ದಾರೆ. ಸವದತ್ತಿಯ ಶ್ರೀ ರೇಣುಕಾದೇವಿ ದೇವಸ್ಥಾನಕ್ಕೆ ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೊದಲು ರಮೇಶ್ ಜಾರಕಿಹೊಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರೆಳಿದರು.

ಅರ್ಧಗಂಟೆ ಬಳಿಕ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ರಮೇಶ್​ ಹಾಗೂ ಲಖನ್ ಸವದತ್ತಿ ಯಲ್ಲಮ್ಮ ದೇವಿ, ಜೋಗುಳಬಾವಿ ಸತ್ಯವ್ವದೇವಿ ದರ್ಶನ ಪಡೆದರು. ಸವದತ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಅಷ್ಟೇ ಅಲ್ಲ, ಸಹೋದರ ಲಖನ್ ಪರವೂ ರಮೇಶ್ ಮತ ಬೇಟೆ ನಡೆಸಿದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ ಕೋಲಾರ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.