ETV Bharat / city

ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರ ನೋಡಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ - Instead of looking at the Arundhati star, newly married couple see the portrait of Puneet

ರಾಜರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ 5 ತಿಂಗಳು ಕಳೆದರೂ ಪುನೀತ್ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ತನ್ನ ವಿವಾಹದ ದಿನದಂದು ಪುನೀತ್ ರಾಜ್ ಕುಮಾರ್ ಅವರಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ.

instead-of-looking-at-the-arundhati-star-newly-married-couple-see-the-portrait-of-puneet
ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರ ನೋಡಿ ನವ ಜೀವನಕ್ಕೆ ಕಾಲಿಟ್ಟ ಜೋಡಿ
author img

By

Published : Apr 21, 2022, 10:12 AM IST

ಚಿಕ್ಕೋಡಿ(ಬೆಳಗಾವಿ): ರಾಜರತ್ನ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ 5 ತಿಂಗಳು ಕಳೆದರೂ ಪುನೀತ್ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ ತನ್ನ ವಿವಾಹದ ದಿನದಂದು ಪುನೀತ್ ರಾಜ್ ಕುಮಾರ್ ಅವರಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ.

ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರ ನೋಡಿ ನವ ಜೀವನಕ್ಕೆ ಕಾಲಿಟ್ಟ ಜೋಡಿ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಹಾಗೂ ಜ್ಯೋತಿ ತಮ್ಮ ಮದುವೆಯಲ್ಲಿ ಪುನೀತ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪಟ್ಟಣದಲ್ಲಿ ನಡೆದ ಆನಂದ ಮತ್ತು ಜ್ಯೋತಿ ಅವರ ಅದ್ಧೂರಿ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. ಕಲ್ಯಾಣ ಮಂಟಪದಲ್ಲಿ ಪುನೀತ್ ಭಾವಚಿತ್ರಗಳನ್ನು ಹಾಕಲಾಗಿತ್ತು, ಜೊತೆಗೆ ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು.

ಅರುಂಧತಿ ನಕ್ಷತ್ರದ ಬದಲು ಪುನೀತ್ ಭಾವಚಿತ್ರಕ್ಕೆ ನಮನ : ಬಹುತೇಕ ಮದುವೆ ಸಮಾರಂಭಗಳಲ್ಲಿ ನವ ವಧು-ವರ ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ. ಆದರೆ, ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದಿದ್ದಾರೆ. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದಗೆ ಆತನ‌ ಸ್ನೇಹಿತರು ಪುನೀತ್ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಧುಮಗ ಆನಂದ ಮತ್ತು ಅವರ ಸ್ನೇಹಿತರು ಪುನೀತ್ ಹಾಡುಗಳನ್ನು ಹಾಡಿ‌ ಮದುವೆಗೆ ಇನ್ನಷ್ಟು ಮೆರುಗು ತಂದರು. ಮದುವೆಯ ನಂತರ ಪುನೀತ್ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಪುನೀತ್ ಅಪ್ಪಟ ಅಭಿಮಾನಿಯಾಗಿರುವ ಆನಂದ ಪಟ್ಟಣ ಅವರ ಮದುವೆ ಸಂಪೂರ್ಣ ಪುನೀತ್ ಮಯವಾಗಿತ್ತು. ಪುನೀತ್ ಎಲ್ಲೂ ಹೋಗಿಲ್ಲ, ನಮ್ಮ ಮನದಲ್ಲೇ ಇದ್ದಾರೆ ಎನ್ನುವುದಕ್ಕೆ ಈ ಮದುವೆ ಸಾಕ್ಷಿಯಾಗಿತ್ತು.

ಓದಿ : ಮೆಟ್ರೋ ಕಾಮಗಾರಿ: ಮರಗಳನ್ನು ಕಡಿಯಲು ಸಮ್ಮತಿ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.