ETV Bharat / city

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಿದ ಡಿಸಿಎಂ ಸವದಿ - Deputy Chief Minister Laxman Sawadi

ಅಥಣಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 200 ಆಶಾ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಪ್ರೋತ್ಸಾಹ ಧನದ ಚೆಕ್​​ ವಿತರಿಸಿದರು.

Distribute Incentive fund
ಪ್ರೋತ್ಸಾಹ ಧನ ವಿತರಿಸಿದ ಡಿಸಿಎಂ ಲಕ್ಷ್ಮಣ್ ಸವದಿ
author img

By

Published : Jun 17, 2020, 1:05 PM IST

ಅಥಣಿ: ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೊರೊನಾ ವಿರುದ್ಧ ಹೋರಾಡಿದ ತಾಲೂಕಿನ 200 ಆಶಾ ಕಾರ್ಯಕರ್ತೆಯರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ್​​ ಸವದಿ ಪ್ರೋತ್ಸಾಹ ಧನದ ರೂಪವಾಗಿ 3 ಸಾವಿರ ರೂಪಾಯಿಯ ಚೆಕ್​​​​ಗಳನ್ನು ವಿತರಿಸಿದರು.

ಬಳಿಕ ಮಾತನಾಡಿದ ಸಚಿವ ಸವದಿ, ಕೋವಿಡ್ ವಿರುದ್ಧ ವೈದ್ಯರ ಜೊತೆಗೂಡಿ ಆಶಾ ಕಾರ್ಯಕರ್ತರು ಕೆಲಸ ಮಾಡಿದ್ದನ್ನು ಗುರುತಿಸಿ ಅಭಿನಂದಿಸುವ ಕೆಲಸಕ್ಕೆ ಸರ್ಕಾರ ಚಾಲನೆ ನೀಡಿದೆ. ಹಾಗೆಯೇ ರಾಜ್ಯದ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮಿಂದ ಸಾಧ್ಯವಾದಷ್ಟು ಪ್ರೋತ್ಸಾಹ ಧನ ನೀಡುತ್ತಿವೆ ಎಂದು ಹೇಳಿದರು.

ಆಶಾ ಕಾರ್ಯಕರ್ತರನ್ನು ಸೈನಿಕರಿಗೆ ಹೋಲಿಸಿದರೆ ತಪ್ಪಾಗುವದಿಲ್ಲ. ಕೊರೊನಾ ನಿಯಂತ್ರಣಕ್ಕೆ ಬರಲು ಬಹಳ ಸಮಯ ತೆಗೆದುಕೊಳ್ಳಲಿದೆ. ಇಂತಹ ಸಂಕಷ್ಟದ ಸ್ಥಿತಿಯನ್ನು ಎದುರಿಸಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರ ಸಹಕಾರ ದೊಡ್ಡದು ಎಂದು ಅಭಿನಂದಿಸಿದ ಅವರು, ನನ್ನ ಕೈಯಾರೆ ನಿಮಗೆ ಚೆಕ್ ಕೊಡುತ್ತಿರುವುದು ನನ್ನ ಸೌಭಾಗ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.