ETV Bharat / city

ಖಾದಿ ಗ್ರಾಮೋದ್ಯೋಗ ನಿಗಮದ ಸ್ಥಾನ ಬೇಡವೆಂದು ಸಿಎಂಗೆ ತಿಳಿಸಿದ್ದೇನೆ : ಶಾಸಕ ದುರ್ಯೋಧನ ಐಹೊಳೆ - ಬೆಳಗಾವಿ ಸುದ್ದಿ

ನನಗೆ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿಯ ಸ್ಥಾನ ನೀಡಿದ್ದಾರೆ. ಆದರೆ, ಆ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಸಿಎಂ ಯಡಿಯೂರಪ್ಪನವರಿಗೆ ತಿಳಿಸಿದ್ದೇನೆ. ನಾನು ಯಾವತ್ತೂ ಮಂತ್ರಿಸ್ಥಾನ ನೀಡುವಂತೆ ದುಂಬಾಲು ಬಿದ್ದಿಲ್ಲ..

I do not want Khadi village employment position: MLA Duryodhana Aihole
ನನಗೆ ಖಾದಿ ಗ್ರಾಮೋದ್ಯೋಗ ಸ್ಥಾನ ಬೇಡವೆಂದು ಸಿಎಂಗೆ ತಿಳಿಸಿದ್ದೇನೆ: ಶಾಸಕ ದುರ್ಯೋಧನ ಐಹೊಳೆ
author img

By

Published : Sep 12, 2020, 5:51 PM IST

ಚಿಕ್ಕೋಡಿ(ಬೆಳಗಾವಿ): ನನಗೆ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಸ್ಥಾನ ಬೇಡ ಎಂದು ಸಿಎಂ ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷಗಿರಿವಹಿಸಿಕೊಳ್ಳದ ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ ತಾಲೂಕಿನ ಮುಗುಳಿ ಗ್ರಾಮದಲ್ಲಿ ಶಾಲಾ ಕೊಠಡಿಗಳ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಬಳಿಕ‌ ಮಾತನಾಡಿದ ಅವರು, ನನಗೆ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿಯ ಸ್ಥಾನ ನೀಡಿದ್ದಾರೆ. ಆದರೆ, ಆ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಸಿಎಂ ಯಡಿಯೂರಪ್ಪನವರಿಗೆ ತಿಳಿಸಿದ್ದೇನೆ. ನಾನು ಯಾವತ್ತೂ ಮಂತ್ರಿಸ್ಥಾನ ನೀಡುವಂತೆ ದುಂಬಾಲು ಬಿದ್ದಿಲ್ಲ.

ಈ ಹಿನ್ನೆಲೆ ತಾವು ನೀಡಿರುವ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿ ಸ್ಥಾನದಿಂದ ನನ್ನ ಕ್ಷೇತ್ರದಲ್ಲಿನ ಯಾವುದೇ ಅಭಿವೃದ್ದಿ ಕಾರ್ಯಗಳು ಆಗುವುದಿಲ್ಲ. ಈ ನಿಟ್ಟಿನಲ್ಲಿ ನನ್ನ ಕ್ಷೇತ್ರಕ್ಕೆ ಅಭಿವೃದ್ದಿಯಾಗುವ ನಿಗಮ ಮಂಡಳಿ ಸ್ಥಾನ ನೀಡಿ ಎಂದು ಮನವಿ ಸಿಎಂಗೆ ಮಾಡಿಕೊಂಡಿದ್ದೇನೆ. ಇದಕ್ಕೆ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ನಾಲ್ಕು ದಿನದಲ್ಲಿ ಬೇರೆ ನಿಗಮಕ್ಕೆ ನೇಮಕ ಮಾಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.