ಬೆಳಗಾವಿ : ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು 24 ಗಂಟೆಯಲ್ಲಿ ಬಿಜೆಪಿಗೆ ತರಬಲ್ಲೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದ ನೂತನ ಗ್ರಾಪಂ ಸದಸ್ಯರ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕೋಡಿ, ನಿಪ್ಪಾಣಿಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ ಎಂದು ಪತ್ರಿಕೆಯಲ್ಲಿ ಓದಿದ್ದೇನೆ.
ಇಷ್ಟಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಹೆಚ್ಚು ಖುಷಿ ಪಡುವ ಅಗತ್ಯವಿಲ್ಲ. ನಾನು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಅವರೆಲ್ಲ ಬಿಜೆಪಿ ಸೇರುವ ಹಾಗೆ ಮಾಡಬಹುದು ಎಂದರು.
ಓದಿ-ಇಂಗ್ಲಿಷ್ ಪದದ ಸ್ಪೆಲ್ಲಿಂಗ್ ಉಲ್ಟಾ ಹೇಳೋದ್ರಲ್ಲಿ ನಿಸ್ಸೀಮ ಈ ಪೋರ!
ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿನ ಗೊಂದಲದಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆದ್ದಿರಬಹುದು. ಬೆಳಗಾವಿ ಗ್ರಾಮೀಣ, ಸವದತ್ತಿ, ಖಾನಾಪುರ, ರಾಯಬಾಗ, ಕುಡಚಿಯಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಬಿಜೆಪಿಗೆ ಸೆಳೆಯಬಲ್ಲೆ. ನನಗದು ದೊಡ್ಡ ವಿಷಯವೇ ಅಲ್ಲ ಎಂದು ಹೇಳಿದರು.