ಚಿಕ್ಕೋಡಿ: ಅಧ್ಯಕ್ಷರೇ ನಿಮ್ಮನ್ನು ನೋಡಿದರೇ ನಮಗೆ ಖುಷಿಯಾಗುತ್ತೆ. ಆದರೆ, ಈ ಹಿಂದಿನದ್ದನ್ನು ನೆನಪಿಸಿಕೊಂಡರೆ ಅದೇನ್ ಶಾಣ್ಯಾರ ಮಾಡುವ ಕೆಲಸಲ್ಲ ಅಂತ ಅನಸುತ್ತಿದೆ ಎಂದು ಆಪರೇಷನ್ ಕಮಲದ ದಿನಗಳನ್ನು ವೇದಿಕೆ ಮೇಲೆಯೇ ನೆನೆದರು ಅಥಣಿ ಶಾಸಕ ಮಹೇಶ ಕುಮಟಳ್ಳಿ.
ಚಿಕ್ಕೋಡಿಯಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಹೊರಗೆ ಬಂದಾಗ ಜನ ನಮಗೆ ಪ್ರಶ್ನೆ ಕೇಳುತ್ತಿದ್ದರು. ಕಾಂಗ್ರೆಸ್ ಬಿಟ್ಟು ಹೊರಗೆ ಬಂದ್ರಿ, ಆದರೆ ಮುಂದೆ ಏನು ಅಂತ ಕೇಳುತ್ತಿದ್ದರು. ಆಗ ನಾನು ಸಹ ಮುಂದೆ ಹೇಗೋ ಏನೋ ಅಂತಾ ಹೆದರಿದ್ದೆ. 30 ವರ್ಷ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆ. ಆದ್ರೆ ಈಗ ಹೇಳ್ತಿನಿ, ಸಾಯೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಘೋಷಿಸಿದರು.