ಅಥಣಿ: ಇತ್ತೀಚಿಗೆ 150 ಕೋಟಿ ರೂ. ವೆಚ್ಚದಲ್ಲಿ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿಯಡಿ ಅಥಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಐತಿಹಾಸಿಕ ಫಾಸಿಕಟ್ಟೆಯೊಂದು ಒಡೆದು ಹೋಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಥಣಿ ಇತಿಹಾಸವನ್ನು ತೆರದು ನೋಡಿದಾಗ ತಹಶೀಲ್ದಾರ್ ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಮಧ್ಯ ಭಾಗದಲ್ಲಿ ಫಾಸಿಕಟ್ಟೆಯನ್ನು ನಿರ್ಮಿಸಲಾಗಿತ್ತು. ಅಂದ್ರೆ (ಗಲ್ಲು ಶಿಕ್ಷೆ ನೀಡುವ ಸ್ಥಳ) ಇದಕ್ಕೆ ಫಾಸಿಕಟ್ಟೆ ಎಂದು ಕರೆಯುವುದು ರೂಢಿ. ಆದ್ರೆ ಈ ಐತಿಹಾಸಿಕ ಫಾಸಿಕಟ್ಟೆ ರಸ್ತೆ ಅಗಲೀಕರಣ ಮಾಡುವಾಗ ಒಡೆದು ಹೋಗಿದ್ದು, ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಕರ್ತವ್ಯ. ಆದ್ರೆ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ನಡೆದಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದ ಇತಿಹಾಸವನ್ನು ರಕ್ಷಿಸಬೇಕಿದೆ.