ಬೆಳಗಾವಿ: ದಸರಾ ಹಿನ್ನೆಲೆಯಲ್ಲಿ ತಲ್ವಾರ್ ಹಿಡಿದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸಂಭ್ರಮಿಸಿದ ಘಟನೆ ಬೆಳಗಾವಿಯ ಬ್ರಹ್ಮನಗರದ ಹನುಮಾನ ದೇವಸ್ಥಾನ ಬಳಿ ನಡೆದಿದೆ.
ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ನಡು ಬೀದಿಯಲ್ಲಿ ತಲ್ವಾರ್ ಹಿಡಿದು ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
ಮಾರಕಾಸ್ತ್ರ ಹಿಡಿದು ಸಂಭ್ರಮಿಸುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದರು. ಸದ್ಯ ಕಾರ್ಯಕರ್ತರು ತಲ್ವಾರ್ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.