ಬೆಳಗಾವಿ : ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಕುಂದಾನಗರಿ ಬೆಳಗಾವಿಯ ಕಬ್ಬು ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಬೆಳಗಾವಿ ಹೊರವಲಯದ ಸಾಂಬ್ರಾ ರಸ್ತೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಗಳೆಲ್ಲವೂ ಸಂಪೂರ್ಣ ಜಲಾವೃತಗೊಂಡಿವೆ. ಹೀಗಾಗಿ, ಇಲ್ಲಿನ ಕಬ್ಬಿನ ಗದ್ದೆಗಳೆಲ್ಲವೂ ನದಿಯಂತೆ ಭಾಸವಾಗುತ್ತಿವೆ.
ಓದಿ: 2 ಮಾವಿನ ಗಿಡದಲ್ಲಿರುವ 7 ಹಣ್ಣುಗಳಿಗೆ ಭಾರೀ ಭದ್ರತೆ: 9 ಶ್ವಾನಗಳ ಜೊತೆ 6 ಕಾವಲುಗಾರರ ನಿಯೋಜನೆ!
ಬೆಳೆದು ನಿಂತಿರುವ ಕಬ್ಬಿನ ಗದ್ದೆಗೆ ಬಳ್ಳಾರಿ ನಾಲಾ ನೀರು ಹರಿದು ಬಂದಿದೆ. ಕಳೆದ ಎರಡು ವರ್ಷಗಳ ಕಾಲ ಪ್ರವಾಹದಿಂದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷವೂ ಮುಂಗಾರು ಮಳೆಯ ಅಬ್ಬರಕ್ಕೆ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಕಬ್ಬು ಬೆಳೆಗಾರರಿದ್ದಾರೆ. ಬೆಳಗಾವಿಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಗೆ ಕಬ್ಬು, ಭತ್ತ ಸೇರಿದಂತೆ ಇತರ ಬೆಳೆ ಬೆಳೆಯುವ ರೈತಾಪಿ ವರ್ಗ ಕಂಗಾಲಾಗಿದೆ.