ಚಿಕ್ಕೋಡಿ: ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಸದಲಗಾ-ಬೋರಗಾಂವ್ ಸೇತುವೆ ಜಲಾವೃತಗೊಂಡಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸದಲಗಾ-ಬೋರಗಾಂವ್ ಸೇತುವೆ ಜಲಾವೃತಗೊಂಡಿದೆ. ಮಹಾ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸದ್ಯ ಒಟ್ಟು 10 ಸೇತುವೆಗಳು ಜಲಾವೃತಗೊಂಡಿವೆ.
ವೇದಗಂಗಾ, ದೂಧಗಂಗಾ, ಹೀರಣ್ಯಕೇಶಿ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಜಲಾವೃತವಾದ ಪರಿಣಾಮ 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗಗಳಿಂದ ಜನ ಸಂಚಾರ ನಡೆಸಿದ್ದಾರೆ.