ETV Bharat / city

ತುಂಡಾದ ಕೈ ಜೋಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ: ಬಾಲಕಿಯ ಮೊಗದಲ್ಲಿ ಮಂದಹಾಸ - undefined

ಆ ಬಾಲಕಿ ತನಗರಿವಿಲ್ಲದೇ ನಡೆದ ಅಪಘಾತವೊಂದರಲ್ಲಿ ಕೈ ಮುರಿದುಕೊಂಡಿದ್ದಳು. ಆದ್ರೆ ಆಕೆ ಅದೃಷ್ಟವಂತೆ. ವೈದ್ಯರು ನಡೆಸಿದ ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಆಕೆಗೆ ಕೈ ಮರಳಿ ಬಂದಿದೆ. ತುಂಡಾಗಿ ಬೇರ್ಪಟ್ಟಿದ್ದ ಕೈಯನ್ನು ಬೆಳಗಾವಿ ಆಸ್ಪತ್ರೆ ವೈದ್ಯರು ಮರುಜೋಡಿಸಿ ಮರುಜೀವ ಕೊಟ್ಟಿದ್ದಾರೆ.

ತುಂಡಾದ ಕೈ ಜೋಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ
author img

By

Published : Jun 15, 2019, 4:40 PM IST

Updated : Jun 15, 2019, 5:40 PM IST

ಬೆಳಗಾವಿ : ಚಲಿಸುತ್ತಿದ್ದ ವಾಹನದಿಂದ ಕೈ ಹೊರ ಹಾಕಿದ ಪರಿಣಾಮ ಅಪಘಾತದಲ್ಲಿ 6 ವರ್ಷದ ಹೆಣ್ಣು ಮಗುವಿನ ತುಂಡಾದ ಕೈಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

6 ವರ್ಷದ ಆಶಿಯಾ ಶೇಕ್ ಎಂಬ ಹೆಣ್ಣು ಮಗು, ಪಿರಣವಾಡಿಯಿಂದ ಬೆಳಗಾವಿಗೆ ಬಸ್ಸಿನಲ್ಲಿ ಬರುವ ವೇಳೆ, ಮಚ್ಚೆ ಗ್ರಾಮದ ಬಳಿ ಬಸ್ಸಿನ ಕಿಟಕಿಯಿಂದ ಕೈ ಹೊರ ಹಾಕಿ‌ ಮಳೆ‌ ನೀರಿನ ಜೊತೆ ಆಟವಾಡುತ್ತಿದ್ದಳು. ಈ ವೇಳೆ ಎದುರುಗಡೆಯಿಂದ ಬಂದ ಲಾರಿಗೆ ತಾಗಿ ಮಗುವಿನ ಬಲಗೈ ತುಂಡಾಗಿತ್ತು.

hand-surgery-done-successfully
ತುಂಡಾಗಿದ್ದ ಬಾಲಕಿಯ ಕೈ

ನಗರದ ವಿಜಯಾ ಆರ್ಥೊ ಮತ್ತು ಟ್ರಾಮಾ ಸೆಂಟರ್‌ನಲ್ಲಿ ಯಶಸ್ವಿ ಕೈ ಜೋಡಣೆ ಮಾಡಲಾಗಿದ್ದು, ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ. ಡಾ. ರವಿ ಪಾಟೀಲ್ ಹಾಗೂ ತಜ್ಞರ ತಂಡ ಸತತ 6 ಘಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವಿನ ಕೈ ಜೋಡಣೆ ಮಾಡಿದ್ದಾರೆ.

ಕೈ ಜೋಡಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ. ರವಿ ಪಾಟೀಲ್ ಮಾತನಾಡಿ, ಅಪಘಾತವಾದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಣ್ಣ ಮಗುವಾದ ಕಾರಣ ಎಲುಬುಗಳ ಬೆಳವಣಿಗೆ ನಿಧಾನವಿರುತ್ತದೆ. ಜೊತೆಗೆ ಸಣ್ಣ ನರಗಳ ಜೋಡಣೆ ಮಾಡುವುದು ಸವಾಲಾಗಿತ್ತು. ಇದೆಲ್ಲವನ್ನೂ ಮೆಟ್ಟಿನಿಂತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ ಎಂದರು.

ಬಾಲಕಿಯ ಮೊಗದಲ್ಲಿ ಮಂದಹಾಸ ತಂದ ಬೆಳಗಾವಿ ವಯದ್ಯರು

ವ್ಯಕ್ತಿಯ ಅಂಗಾಂಗ ತುಂಡಾದಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳೇನು?

ಅಪಘಾತವಾದ ಸಂದರ್ಭದಲ್ಲಿ ದೇಹದ ಯಾವುದೇ ಭಾಗ ತುಂಡಾದರೆ, ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ತುಂಡಾದ ಅಂಗಾಂಗಗಳನ್ನು ಕವರ್​ನಲ್ಲಿ ಹಾಕಿ ಐಸ್​ನಲ್ಲಿಟ್ಟು ಆಸ್ಪತ್ರೆಗೆ ಸಾಗಿಸಬೇಕು. ಅಂಗಾಂಗಗಳಲ್ಲಿ ಸಣ್ಣ ಜೀವಕೋಶಗಳಿಗೆ ಹಾನಿಯಾಗದಂತೆ ತಡೆದರೆ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸಬೇಕು ಎಂದು ಡಾ. ರವಿ ಪಾಟೀಲ್ ಸಲಹೆ ನೀಡಿದ್ದಾರೆ.

Intro:ತುಂಡಾದ ಕೈ ಜೋಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ : ಮಗುವಿನ ಮೊಗದಲ್ಲಿ ಮಂದಹಾಸ

ಬೆಳಗಾವಿ : ಚಲಿಸುತ್ತಿದ್ದ ವಾಹನದಿಂದ ಕೈ ಹೊರ ಹಾಕಿದ ಪರಿಣಾಮ ಅಪಘಾತದಲ್ಲಿ 6 ವರ್ಷದ ಹೆಣ್ಣು ಮಗುವಿನ ತುಂಡಾದ ಕೈಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಕೈ ಜೋಡಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Body:6 ವರ್ಷದ ಆಶಿಯಾ ಶೇಕ್ ಎಂಬ ಹೆಣ್ಣು ಮಗು ಪಿರಣವಾಡಿಯಿಂದ ಬೆಳಗಾವಿಗೆ ಬಸ್ಸಿನಲ್ಲಿ ಬರುವ ವೇಳೆ ಮಚ್ಚೆ ಗ್ರಾಮದ ಬಳಿ ಬಸ್ಸಿನ ಕಿಡಕಿಯಲ್ಲಿ ಕೈ ಹೊರ ಹಾಕಿ‌ ಮಳೆ‌ ನೀರಿನ ಜೊತೆ ಆಟವಾಡುತ್ತಿದ್ದ ವೇಳೆ ಎದುರು ಬಂದ ಲಾರಿ ಡಿಕ್ಕಿ ಹೊಡೆದು ಮಗುವಿನ ಬಲಗೈ ತುಂಡಾಗಿತ್ತು. ನಗರದ ವಿಜಯಾ ಅರ್ಥೊ ಮತ್ತು ಟ್ರೊಮಾ ಸೆಂಟರ್‌ನಲ್ಲಿ ಯಶಸ್ವಿ ಗೈ ಜೋಡಣೆ ಮಾಡಲಾಗಿದ್ದು ಹೆಣ್ಣು ಚೇತರಿಸಿಕೊಳ್ಳುತ್ತಿದ್ದಾಳೆ.

ಡಾ. ರವಿ ಪಾಟೀಲ್ ಹಾಗೂ ತಜ್ಞರ ತಂಡದಿಂದ 6 ಘಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು ಮಗುವಿನ ಕೈ ಜೋಡಣೆ ಮಾಡಿದ್ದಾರೆ. ಮಗುವಿ ಕೈ ಜೋಡಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ರವಿ ಪಾಟೀಲ್ ಮಾತನಾಡಿ. ಅಪಘಾತವಾದ ತಕ್ಷಣ ಮಗುವಿನ ತುಂಡಾದ ಕೈ ಜೊತೆಗೆ ಆಸ್ಪತ್ರೆಗೆ ತರಲಾಗಿತ್ತು. ಸಣ್ಣ ಮಗುವಾದ ಕಾರಣ ಎಲುಬುಗಳ ಬೆಳವಣಿಗೆ ಕಡಿಮೆ ಇರುತ್ತದೆ. ಜೊತೆಗೆ ಸಣ್ಣ ನರಗಳ ಜೋಡಣೆ ಮಾಡುವುದು ಒಂದು ಸವಾಲಾಗಿತ್ತು ಇದೆಲ್ಲವನ್ನೂ ಮೆಟ್ಟಿನಿಂತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಮಾಡಲಾಗಿದೆ ಎಂದರು.

ವ್ಯಕ್ತಿಯ ಅಂಗಾಂಗ ತುಂಡಾದಾಗ ವಹಿಸಬೇಕಾದ Conclusion:ಮುಂಜಾಗ್ರತಾ ಕ್ರಮ : ಅಪಘಾತವಾದ ಸಂದರ್ಭದಲ್ಲಿ ಅಂಗಾಂಗದ ಯಾವುದೇ ಭಾಗ ತುಂಡಾದರೆ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಕಟ್ಟಾದ ಅಂಗಾಂಗಗಳನ್ನು ಕವರ್ ನಲ್ಲಿ ಹಾಕಿ ಐಸ್ ನಲ್ಲಿ ಇಟ್ಟು ಆಸ್ಪತ್ರೆಗೆ ಸಾಗಿಸಬೇಕು. ಅಂಗಾಂಗಳಲ್ಲಿ ಸನ್ನ ಜೀವಕೋಶಗಳಿಗೆ ಹಾನಿಯಾಗದಂತೆ ತಡೆದರೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲು ಸಹಕಾರಿಯಾಗುತ್ತದೆ. ಜೊತೆಗೆ ಅಪಘಾತಕ್ಕೆ ಒಳಗಾದ ವ್ಯಕ್ತಿಯಿನ್ನು ಅಂಗಾಂಗಜ ಜೊತೆಗೆ ಆದಷ್ಟೂ ಬೇಗ ಆಸ್ಪತ್ರೆಗೆ ಸಾಗಿಸಬೇಕು ಎಂದು ಡಾ. ರವಿ ಪಾಟೀಲ್ ಸಲಹೆ ನೀಡಿದರು.

ಬೈಟ್ : ಡಾ. ರವಿ ಪಾಟೀಲ್ ( ಅರ್ಥೊಪೆಡಿಕ್ ಸರ್ಜನ್ )

ವಿನಾಯಕ ಮಠಪತಿ
ಬೆಳಗಾವಿ

Last Updated : Jun 15, 2019, 5:40 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.