ETV Bharat / city

ಬೆಳಗಾವಿ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ.. ಮತ್ತೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇಂದು ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದರು.

Goa CM Pramod Sawant visits Belagavi RSS office
ಬೆಳಗಾವಿ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ
author img

By

Published : Apr 7, 2022, 12:43 PM IST

ಬೆಳಗಾವಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇಂದು ಬೆಳಗಾವಿಯ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದರು. ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ ಆರ್‌ಎಸ್ಎಸ್ ಕಚೇರಿಗೆ ಭೇಟಿ ನೀಡಿದ ಸಿಎಂ ಪ್ರಮೋದ್​ ಸಾವಂತ್ ಮುಖಂಡರ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಖಾಸಗಿ ಕಾರ್ಯಕ್ರಮ ನಿಮಿತ್ತ ಪ್ರಮೋದ್​ ಸಾವಂತ್ ಬೆಳಗಾವಿಗೆ ಆಗಮಿಸಿದ್ದಾರೆ.

ಬೆಳಗಾವಿ ಆರ್‌ಎಸ್ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ

ಆರ್‌ಎಸ್ಎಸ್ ಮುಖಂಡರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಮೋದ್ ಸಾವಂತ್, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಎಲ್ಲೇ ಹೋದರೂ ಆರ್‌ಎಸ್ಎಸ್ ಕಚೇರಿಗೆ ಭೇಟಿ ಕೊಡುತ್ತೇನೆ. ಅದೇ ರೀತಿ ಇಲ್ಲಿಯೂ ಭೇಟಿ ನೀಡಿದ್ದೇನೆ. ಬೆಳಗಾವಿ ಕಾರ್ಯಕ್ರಮ ಮುಗಿಸಿ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿದೇವಿ ದರ್ಶನ ಪಡೆಯುತ್ತೇನೆ. ಕೊಲ್ಲಾಪುರದಲ್ಲಿ ನನ್ನ ಸ್ನೇಹಿತರು ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿ ಜಿಲ್ಲಾ ವಿಭಜನೆ ವಿಚಾರ.. ಸಚಿವ ಕತ್ತಿ ವಿರುದ್ಧ ಗೋಕಾಕ್ ಜನರ ಆಕ್ರೋಶ

ಗೋವಾದಲ್ಲಿ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ಕೊಡುತ್ತೇನೆಂಬ ಭರವಸೆಯ ಮಾತುಗಳನ್ನಾಡಿದರು. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸೇರಿ ಇತರೆ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.