ETV Bharat / city

ಬೆಳಗಾವಿ ಅಧಿವೇಶನಕ್ಕೆ ಖಾಕಿ ಕಣ್ಗಾವಲು ; ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿ ಟೌನ್​ಶಿಪ್​​ ನಿರ್ಮಾಣ - belgavi session preparation

ಬೆಳಗಾವಿ ಅಧಿವೇಶನಕ್ಕೆ ನಿಯೋಜನೆಗೊಂಡಿರುವ ಪೊಲೀಸರಿಗೆ ಸುಸಜ್ಜಿತ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿಯಲ್ಲಿ ಟೌನ್‌ಶಿಪ್ ನಿರ್ಮಿಸಲಾಗಿದೆ..

German style township for a police staff at Belagavi
ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿಯ ಟೌನ್​ಶಿಪ್​​ ನಿರ್ಮಾಣ
author img

By

Published : Dec 11, 2021, 6:14 PM IST

ಬೆಳಗಾವಿ : ಡಿ.13ರಿಂದ ಡಿ.24ರವರೆಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಸಜ್ಜಾಗಿದೆ. ಸುಸೂತ್ರ ಅಧಿವೇಶನಕ್ಕಾಗಿ ಖಾಕಿ ಕಣ್ಗಾವಲು ಇರಿಸಿದೆ. ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ನೇತೃತ್ವದಲ್ಲಿ 4 ಸಾವಿರ ಪೊಲೀಸರು ಅಧಿವೇಶನಕ್ಕೆ ನಿಯೋಜಿಸಲಾಗಿದೆ.

15 ಎಸ್‌ಪಿ, ಇಬ್ಬರು ಡಿಸಿಪಿ, 35 ಡಿವೈಎಸ್‌ಪಿ, 100 ಸಿಪಿಐ, 250ಪಿಎಸ್ಐ, ಹೋಮ್ ಗಾರ್ಡ್‌ಗಳು ಸೇರಿ ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ರಾಜ್ಯ ಸರ್ಕಾರ ನಿಯೋಜಿಸಿದೆ. ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಎಲ್ಲ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಪೊಲೀಸರು ಭದ್ರತೆ ಒದಗಿಸಲಿದ್ದಾರೆ.

ಜರ್ಮನ್ ಮಾದರಿಯ ಟೌನ್ ಶಿಪ್​ ನಿರ್ಮಾಣ : ಅಧಿವೇಶನಕ್ಕೆ ನಿಯೋಜನೆಗೊಂಡಿರುವ ಪೊಲೀಸರಿಗೆ ಸುಸಜ್ಜಿತ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ 2 ಸಾವಿರ ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿಯಲ್ಲಿ ಟೌನ್‌ಶಿಪ್ ನಿರ್ಮಿಸಲಾಗಿದೆ. ಇಲ್ಲಿ ಸುಸಜ್ಜಿತ ಬೆಡ್, ಬೆಡ್​ಶೀಟ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಫ್ಯಾನ್, ಲೈಟ್, ಶೌಚಗೃಹ ನಿರ್ಮಾಣ, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಕುಡಿಯುವ ನೀರಿಗೆ ಆರ್‌ಒ ಪ್ಲ್ಯಾಂಟ್ ಅಳವಡಿಸಲಾಗಿದೆ. ನಾಲ್ಕು ಟೌನ್‌ಶಿಪ್ ತೆರೆಯಲಾಗಿದೆ. ಪ್ರತಿ ಟೆಂಟ್​ನಲ್ಲಿ 5 ಜನ ಸಿಬ್ಬಂದಿ ವಾಸ್ತವ್ಯಕ್ಕೆ ವ್ಯವಸ್ಥೆ ‌ಇದೆ.

ಪೊಲೀಸರ ವಾಸ್ತವ್ಯಕ್ಕೆ ಜರ್ಮನ್ ಮಾದರಿಯ ಟೌನ್​ಶಿಪ್​​ ನಿರ್ಮಾಣ..

ಉಳಿದಂತೆ ಸಾಂಬ್ರಾದ ಏರ್ಮನ್ ಟ್ರೈನಿಂಗ್ ಸ್ಕೂಲ್‌ನಲ್ಲಿ 500 ಜನ, ಮರಾಠ ರೆಜಿಮೆಂಟ್‌ನಲ್ಲಿ 400 ಜ‌ನ, ಮಚ್ಚೆಯಲ್ಲಿರುವ ಕೆಎಸ್‌ಆರ್‌ಪಿ ಹಾಲ್‌ನಲ್ಲಿ 500 ಜನ ಹಾಗೂ ಪಿಟಿಎಸ್ ಕಂಗ್ರಾಳಿಯಲ್ಲಿ 400 ಜನ ಮಹಿಳಾ ಪೊಲೀಸ್ ಸಿಬ್ಬಂದಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕೋವಿಡ್ ‌ವರದಿ ಕಡ್ಡಾಯ : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ನಿಯೋಜನೆಗೊಂಡಿರುವ ಪೊಲೀಸರಿಗೆ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಅಲ್ಲದೇ ಲಸಿಕೆಯ ಎರಡೂ ಡೋಸ್ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ವ್ಯಾಕ್ಸಿನ್ ಮತ್ತು ನೆಗೆಟಿವ್ ವರದಿ ಇದ್ರೇ ಮಾತ್ರ ಅಧಿವೇಶನ ಕರ್ತವ್ಯಕ್ಕೆ ಅನುಮತಿ ನೀಡಲಾಗಿದೆ.

ಎರಡು ಸಾವಿರಕ್ಕೂ ಅಧಿಕ ಸಿಬ್ಬಂದಿ : ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತದಿಂದ ಕೊನೆ ಹಂತದ ಸಿದ್ಧತೆ ನಡೆಯುತ್ತಿದೆ. ಅಧಿವೇಶನಕ್ಕೆ ಬರುವ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮತ್ತು ವಿಧಾನಸಭೆ ಸಚಿವಾಲಯದ ಸಿಬ್ಬಂದಿ ವಾಸ್ತವ್ಯಕ್ಕೆ ಹೋಟೆಲ್, ರೆಸಾರ್ಟ್‌ಗಳನ್ನು ಬುಕ್ ಮಾಡಲಾಗಿದೆ. 100ಜನ ಐಎಎಸ್ ಅಧಿಕಾರಿಗಳು, 50 ಐಪಿಎಸ್ ಅಧಿಕಾರಿಗಳು, ಒಂದು ಸಾವಿರ ವಿಧಾನಸಭೆ ಸಚಿವಾಲಯದ ಸಿಬ್ಬಂದಿ ಆಗಮಿಸಲಿದ್ದಾರೆ. ವಾಸ್ತವ್ಯದ ಸ್ಥಳಗಳಲ್ಲೇ ಬೆಳಗ್ಗೆ ಉಪಾಹಾರ, ಸಂಜೆ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಎಲ್ಲರಿಗೂ ಸುವರ್ಣ ಸೌಧದಲ್ಲೇ ಊಟದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ಸರ್ವ ರೀತಿಯಲ್ಲಿ ಸಜ್ಜಾಗಿದ್ದೇವೆ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.