ಬೆಳಗಾವಿ: ಧಾರವಾಡ ಜಿಲ್ಲೆಯ ಪ್ರಮುಖ ಜೆಡಿಎಸ್ ನಾಯಕ ಎನ್.ಎಚ್. ಕೊನರೆಡ್ಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಎಚ್ ಕೋನರೆಡ್ಡಿ ಅವರನ್ನು ಪಕ್ಷದ ಬಾವುಟ ನೀಡಿ ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಬಳಿಕೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಎನ್.ಎಚ್ ಕೊನರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ, ಅವರಿಗೆ ಶಕ್ತಿ ಬಂದತಾಗಿದೆ. ಅವರಿಗೆ ಇದು ದೊಡ್ಡ ಭಾಗ್ಯ. ನಾವೇನು ಕಾಂಗ್ರೆಸ್ ಅಪರೇಷನ್ ಮಾಡುತ್ತಿಲ್ಲ. ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಪಕ್ಷ ಸಂಘಟನೆ ಬಲಪಡಿಸುತ್ತಿದ್ದೇವೆ. ವಿರೋಧ ಪಕ್ಷದಲ್ಲಿಕೊಂಡು ಬಹಳ ಅಂತರದಿಂದ ಗೆಲುವು ಸಾಧಿಸಿರುವುದು ಸಂತಸ ತಂದಿದೆ ಎಂದರು.
ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ. ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದಿರುವುದು ಸಂತಸದ ವಿಷಯ ಎಂದರು. ಚನ್ನರಾಜ್ ಹಟ್ಟಿಹೊಳಿ ಗೆಲುವಿಗೆ ಸತೀಶ್ ಜಾರಕಿಹೊಳಿ ಬಹಳಷ್ಟು ಪರಿಶ್ರಮ ಪಟ್ಟಿದ್ದಾರೆ. ಇವರ ಸತತ ಪ್ರಯತ್ನವೇ ಫಲ ನೀಡಿದೆ. ಸತೀಶ್ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹೋರಾಟಗಾರ ಕೊನರೆಡ್ಡಿ ಅವರು ನನಗೆ ತುಂಬಾ ಆತ್ಮೀಯ ಗೆಳೆಯ. ಜೆಡಿಎಸ್ನಲ್ಲಿದ್ದರೂ ನನ್ನ ಬಗ್ಗೆ ಅಪಾರ ಅಭಿಮಾನ ಇಟ್ಟಿರುವ ನಾಯಕ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದು ಮತ್ತಷ್ಟು ಬಲಬಂದಿದೆ. ಜೆಡಿಎಸ್ನಲ್ಲಿ ಯಾವುದೇ ರೀತಿಯ ಸಿದ್ದಾಂತ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗುತ್ತಿದೆ. ಕೊನರೆಡ್ಡಿ ಜೆಡಿಎಸ್ ತೊರೆಯುವ ತಿರ್ಮಾನ ಮಾಡಿದ್ದೂ ಒಳ್ಳೆಯದ್ದು, ಕಾಂಗ್ರೆಸ್ನಲ್ಲಿ ಅವರ ಭವಿಷ್ಯ ಉಜ್ವಲಗೊಳಲಿದೆ ಎಂದರು.
ಉತ್ತರ ಕರ್ನಾಟಕ ಸಮಸ್ಯೆಗೆ ಧ್ವನಿಯಾಗಿ ಅನೇಕ ಹೋರಾಟ ಮಾಡಿದ ಪ್ರಾಮಾಣಿಕ ನಾಯಕ ಇವರು. ಹಿಂದಿನ ಭಾಗಲಿನಿಂದ ಅಧಿಕಾರಕ್ಕೆ ಬಂದಿರುವ ಕೋಮುಮಾದಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಿತ್ತೆಸೆಯಬೇಕು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಜನತೆಗೆ ಸಂಕಷ್ಟ ಶುರುವಾಗಿದೆ. ಕೋಮುವಾದಿ ಪಕ್ಷವನ್ನು ಕಿತ್ತೆಸೆದಾಗ ರಾಜ್ಯದ ಜನರು ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದರು. ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ, ಎಚ್ ಕೆ ಪಾಟೀಲ್, ಡಿ ಕೆ ಹರಿಪ್ರಸಾದ್, ಮಾಜಿ ಸಭಾಪತಿ ರಮೇಶ್ ಕುಮಾರ್, ಮಾಜಿ ಉಪಮುಖಮಂತ್ರಿ ಡಾ. ಪರಮೇಶ್ವಶ್, ನಾಸೀರ್ ಹುಸೇನ್ ಉಪಸ್ಥಿತರಿದ್ದರು.