ETV Bharat / city

ಕಾಡುಕೋಣ ಇರಿದು ಎಡಗೈ, ಬೆನ್ನೆಲುಬು ಮುರಿದುಕೊಂಡ ದಿನಗೂಲಿ ನೌಕರ: ಪರಿಹಾರಕ್ಕೆ ಪರದಾಟ - Forest Watcher injured by bison attack

ಕಾಡುಕೋಣ ಇರಿದು ಎಡಗೈ ಮೂಳೆ ಮುರಿದುಕೊಂಡ ಅರಣ್ಯ ಇಲಾಖೆ ದಿನಗೂಲಿ ನೌಕರನೊಬ್ಬ ಕೆಲಸವಿಲ್ಲದೇ, ಸಂಬಳವೂ ಸಿಗದೇ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಅರಣ್ಯ ಸಚಿವ ಉಮೇಶ್ ಕತ್ತಿ ತವರು ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ.

Forest Watcher
ಬೆಳಗಾವಿಯಲ್ಲಿ ಪರಿಹಾರಕ್ಕಾಗಿ ದಿನಗೂಲಿ ನೌಕರನ ಪರದಾಟ
author img

By

Published : Jul 24, 2022, 12:38 PM IST

ಬೆಳಗಾವಿ: ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ವೀಕ್ಷಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬ ಮಾತು ಕೇಳಿಬಂದಿದೆ. ಕಾಡುಕೋಣವೊಂದು ಇರಿದು ಕೈ, ಬೆನ್ನೆಲುಬು ಮುರಿದುಕೊಂಡ ಅರಣ್ಯ ಇಲಾಖೆಯ ದಿನಗೂಲಿ ನೌಕರರೊಬ್ಬರು ಇತ್ತ ಕೆಲಸವಿಲ್ಲದೆ, ಅತ್ತ ಪರಿಹಾರವೂ ಇಲ್ಲದೇ ಅಲೆದಾಡುತ್ತಿದ್ದಾರೆ.

ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ಕೃಷ್ಣ ಗುರವ್ ಎಂಬುವರು ಸಂಕಷ್ಟದ ಜೀವನ ಕಳೆಯುತ್ತಿದ್ದಾರೆ. ಮೇ 3 ರಂದು ಕೆಂಪಟ್ಟಿ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಕೆಂಪಟ್ಟಿ ಗ್ರಾಮಸ್ಥರು ದೂರು ನೀಡಿದ್ದರು. ಚಿಕ್ಕೋಡಿ ಅರಣ್ಯ ಇಲಾಖೆ ರೇಂಜ್‌ನಲ್ಲಿ ದಿನಗೂಲಿ ಆಧಾರದಲ್ಲಿ ಅರಣ್ಯ ವೀಕ್ಷಕನಾಗಿ ಕೆಲಸ ಮಾಡ್ತಿದ್ದ ಕೃಷ್ಣ ಗುರವ್ ಸೇರಿ ಇತರೆ ಸಿಬ್ಬಂದಿಯನ್ನು ಕಾಡುಕೋಣ ಸೆರೆ ಹಿಡಿಯಲು ಕಳುಹಿಸಲಾಗಿತ್ತು.

ಈ ವೇಳೆ ಕೃಷ್ಣ ಗುರವ್ ಹೋಗಲು ನಿರಾಕರಿಸಿದ್ದಾರೆ. ಇದಕ್ಕೆ ಮೇಲಧಿಕಾರಿಗಳು ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದ್ದಾರೆ ಎಂಬ ಆರೋಪವಿದೆ. ಕಾಡುಕೋಣ ಸೆರೆ ಹಿಡಿಯುವ ಬಗ್ಗೆ ಏನು ಗೊತ್ತೇ ಇಲ್ಲದ ಅಮಾಯಕ ದಿನಗೂಲಿ ನೌಕರನನ್ನು ಅಧಿಕಾರಿಗಳು ಕಳುಸಿದ್ದಾರೆ‌. ಕಾರ್ಯಾಚರಣೆ ನಡೆಯುತ್ತಿದ್ದಾಗ ಕಾಡುಕೋಣ ಇರಿದು ಕೃಷ್ಣ ಗುರವ್ ಅವರ ಎಡಗೈ, ಬೆನ್ನೆಲುಬು ಮೂಳೆ ಮುರಿದು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅಧಿಕಾರಿಗಳು ಕೃಷ್ಣ ಗುರವ್‌ಗೆ ಆಸ್ಪತ್ರೆಯ ಸಂಪೂರ್ಣ ಚಿಕಿತ್ಸಾ ವೆಚ್ಚಸಮೇತ ಖಾಯಂ ನೌಕರಿ, ವೇತನ ನೀಡುವ ಭರವಸೆ ನೀಡಿದ್ದರಂತೆ. ಆದ್ರೆ, ಬಳಿಕ ಆಸ್ಪತ್ರೆ ಚಿಕಿತ್ಸಾ ವೆಚ್ಚ 60 ಸಾವಿರ ರೂ.‌ ನೀಡಿ ಕೈ ತೊಳೆದುಕೊಂಡಿದ್ದಾರೆ. ಈ ಕುರಿತು ಮೇಲಧಿಕಾರಿ ಉಮೇಶ್ ವಿರುದ್ಧ ಪ್ರಧಾನಿ ಮತ್ತು ರಾಯಬಾಗ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

"ಘಟನೆಗೂ ಮುನ್ನ ತಾನು ಸೇವೆ ಸಲ್ಲಿಸಿದ ಎರಡು ತಿಂಗಳ ವೇತನವನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿಲ್ಲ. ಮನೆಯಲ್ಲಿ ಇಬ್ಬರು ಚಿಕ್ಕ ಮಕ್ಕಳು, ಪತ್ನಿ, ವೃದ್ಧ ತಂದೆ-ತಾಯಿ ಇದ್ದಾರೆ. ಹೇಗಾದರೂ ಸಹಾಯ ಮಾಡಿ ಕೆಲಸ ಮತ್ತು ಬಾಕಿ ವೇತನ ಕೊಡಿಸಿ" ಎಂದು ದಿನಗೂಲಿ ನೌಕರ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: 50 ಅಡಿ ಆಳದ ಬಾವಿಗೆ ಬಿದ್ದಿದ್ದ ಕಾಡುಕೋಣ.. 3 ಗಂಟೆ ಕಾರ್ಯಾಚರಣೆ, ಬದುಕಿತು ಬಡಜೀವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.