ಅಥಣಿ : ತಾಲೂಕಿನ ಸಂಕೋನಟ್ಟಿ ಗ್ರಾಮದ ವೇಷಗಾರ ಸಮಾಜದ 30ಕ್ಕೂ ಹೆಚ್ಚು ಕುಟುಂಬಗಳಿಗೆ ಇಂದು ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಅಥಣಿ ಪಟ್ಟಣದ ಹೋಂ ಗಾರ್ಡ್ಸ್ ಮಾನವೀಯತೆ ಮೆರೆದಿದ್ದಾರೆ.
ತಮ್ಮ ನಿತ್ಯದ ದುಡಿಮೆ ಆದಾಯದಲ್ಲಿ ಎರಡು ಕ್ವಿಂಟಾಲ್ ಅಕ್ಕಿ, 40 ಲೀಟರ್ ಅಡುಗೆ ಎಣ್ಣೆ, 40 ಕೆಜಿ ತರಕಾರಿ ಹಂಚಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 5 ಕೆಜಿ ಅಕ್ಕಿ, ಬೇಳೆ ವಿತರಿಸಲಾಗಿದೆ.