ETV Bharat / city

ನಾಡಿನ ರೈತರ ಬದುಕು ಚಿತ್ರಾನ್ನ; ಕೇಂದ್ರದಿಂದ ನಯಾಪೈಸೆ ಪರಿಹಾರ ಹಣ ಬಂದಿಲ್ಲ: ಸಿದ್ದರಾಮಯ್ಯ ಕೆಂಡಾಮಂಡಲ - ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಸತತ 3 ವರ್ಷಗಳು ಪ್ರವಾಹ, ಅತಿವೃಷ್ಟಿ ಹಾಗೂ ಕೆಲವು ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಕಂಡಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ಬಾರಿ ಪ್ರವಾಹ ಬಂದಿದೆ. ಹೀಗಾಗಿ ರಾಜ್ಯದ ರೈತರ ಕಷ್ಟ ಚಿತ್ರಾನ್ನವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಪ್ರವಾಹ, ಅತಿವೃಷ್ಟಿ ಮೇಲಿನ ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸಿ ಅವರು ಮಾತನಾಡಿದರು.

farmers facing problems; central govt didn't give single paisa compensation - siddaramaiah
ನಾಡಿನ ರೈತರ ಬದುಕು ಚಿತ್ರಾನ್ನವಾಗಿದೆ; ಕೇಂದ್ರದಿಂದ ನಯಾಪೈಸೆ ಪರಿಹಾರ ಹಣ ಬಂದಿಲ್ಲ: ಸಿದ್ದರಾಮಯ್ಯ
author img

By

Published : Dec 13, 2021, 7:12 PM IST

ಬೆಳಗಾವಿ: ನಾಡಿನ ರೈತರ ಬದುಕು ಚಿತ್ರಾನ್ನವಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರದ ಹಣ ಸಿಕ್ಕಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಪ್ರವಾಹ, ಅತಿವೃಷ್ಟಿ ಮೇಲಿನ ನಿಲುವಳಿ ಸೂಚನೆ ಪ್ರಸ್ತಾವನೆ ಮಂಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸತತ 3 ವರ್ಷಗಳು ಪ್ರವಾಹ, ಅತಿವೃಷ್ಟಿ ಹಾಗೂ ಕೆಲವು ಜಿಲ್ಲೆಗಳು ಬರ ಪರಿಸ್ಥಿತಿ ಕಂಡಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರು ಬಾರಿ ಪ್ರವಾಹ ಬಂದಿದೆ.

ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತ, ಜುಲೈ- ಆಗಸ್ಟ್‌ನಲ್ಲಿ ಪ್ರವಾಹ ಹಾಗೂ ಅಕ್ಟೋಬರ್ - ನವೆಂಬರ್‌ನಲ್ಲಿ ಅತಿವೃಷ್ಟಿ ಆಗಿದೆ. 60 ವರ್ಷಗಳಲ್ಲೇ ನವೆಂಬರ್ ತಿಂಗಳಲ್ಲಿ ಈ ರೀತಿಯ ಮಳೆಯಾಗಿರಲಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ 23 ಜಿಲ್ಲೆಗಳು ಅತಿವೃಷ್ಟಿಗೆ ಒಳಗಾಗಿವೆ ಎಂದು ವಿವರಿಸಿದರು.

ರಾಜ್ಯಾದ್ಯಂತ ರೈತರು 78 ಲಕ್ಷ 83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಇದರಲ್ಲಿ ಶೇ.75 ರಷ್ಟು ಬೆಳೆ ಹಾನಿಯಾಗಿದೆ. ಭತ್ತ, ರಾಗಿ, ಶೇಂಗಾ, ಮೆಕ್ಕೆಜೋಳ, ಕಾಫಿ, ಮೆಣಸು, ಅಡಕೆ ಮುಂತಾದ ಹಣ್ಣು, ತರಕಾರಿ, ಹೂವು ಬೆಳೆದ ರೈತರು ಬೆಳೆ ಕಳೆದುಕೊಂಡು ಕಷ್ಟದಲ್ಲಿದ್ದಾರೆ. ಈ ವರ್ಷ ಒಟ್ಟು 12.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಪ್ರವಾಹ, ಅತಿವೃಷ್ಟಿಗಳಿಂದಾಗಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2.5 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ - ನವೆಂಬರ್‌ನಲ್ಲಿ ವಾಡಿಕೆಯಂತೆ 166 ಮಿ.ಮೀ ಮಳೆ ಆಗಬೇಕಿತ್ತು. ಆದರೆ, ಈ ವರ್ಷ 307 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕೈಸೇರಬೇಕಿದ್ದ ಮುಂಗಾರು ಬೆಳೆಯ ಫಸಲು ಸಂಪೂರ್ಣ ನಷ್ಟವಾಗಿದೆ. ನಾನು ಹೋದ ಕಡೆಗಳಲೆಲ್ಲಾ ಜನ ಬೆಳೆ ಪರಿಹಾರದ ಹಣ ಸಿಗೋಕೆ ನೀವೇ ಏನಾದ್ರೂ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್‌ನಿಂದ 4,500 ಕಲೆಕ್ಟ್ ಆಗುತ್ತಿತ್ತು. 2020-21ರಲ್ಲಿ ಎಕ್ಸೈಜ್​ ಸುಂಕದ ರೂಪದಲ್ಲಿ 36 ಸಾವಿರ ಕೋಟಿ ಸಂಗ್ರಹ ಆಗಿದೆ. ಕೇವಲ ಪೆಟ್ರೋಲ್, ಡೀಸೆಲ್ ಮೇಲೆ ಇಷ್ಟೊಂದು ತೆರಿಗೆ ಸಂಗ್ರಹ ಮಾಡಲಾಗ್ತಿದೆ ಎಂದರು.

ಇದನ್ನೂ ಓದಿ: ನಟ ಪುನೀತ್​ಗೆ ಪುನೀತ್ ಮಾತ್ರ ಸಾಟಿ.. ಹೆಲಿಕಾಪ್ಟರ್ ದುರಂತದ ತನಿಖೆಯಾಗಲಿ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.