ETV Bharat / city

ಬೆಳಗಾವಿ ಎಪಿಎಂಸಿಗೆ ಚುನಾವಣೆ: ಕಾಂಗ್ರೆಸ್​ & ಬಿಜೆಪಿ ನಡುವೆ ಪೈಪೋಟಿ - Election to APMC President-Vice President

ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ.

APMC
ಎಪಿಎಂಸಿ
author img

By

Published : Jun 15, 2020, 12:21 PM IST

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಸ್ತುತ ಎಪಿಎಂಸಿ ಚುನಾವಣೆಯಲ್ಲಿ ಒಟ್ಟು 17 ಸದಸ್ಯರಿದ್ದಾರೆ. ಇದರಲ್ಲಿ 11 ಮಂದಿ ಕೃಷಿ ಹುಟ್ಟುವಳಿ ಕ್ಷೇತ್ರದಿಂದ, ಇಬ್ಬರು ಸೊಸೈಟಿ ಮತ್ತು ವರ್ತಕರ ಕ್ಷೇತ್ರದಿಂದ ಒಬ್ಬರು ಸೇರಿ 14 ಸದಸ್ಯರಿದ್ದಾರೆ. ಉಳಿದ ಮೂವರು‌ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದಾರೆ.

ಇವರೆಲ್ಲರಿಗೂ ಮತದಾನದ ಹಕ್ಕಿದ್ದರೂ, ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಕೃಷಿ ಹುಟ್ಟುವಳಿ ಕ್ಷೇತ್ರಗಳಿಂದ ಬಂದವರಿಗೆ ಮಾತ್ರ ಹುದ್ದೆ ಅವಕಾಶ ಇದೆ ಎನ್ನಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಎಪಿಎಂಸಿ ಚುನಾವಣೆ ಮತ್ತೊಮ್ಮೆ ರಾಜಕೀಯ ಪ್ರತಿಷ್ಠೆ ಕಣವಾಗಿ‌ ರೂಪುಗೊಂಡಿದೆ.

ಬೆಳಗಾವಿ ಎಪಿಎಂಸಿ

ಯಾರು ಹುದ್ದೆ ಅಲಂಕರಿಸಲಿದ್ದಾರೆ ಎಂಬ ಪ್ರಶ್ನೆಗೆ ಮಧ್ಯಾಹ್ನದ ನಂತರವೇ ಉತ್ತರ ಸಿಗಲಿದೆ. ಮೊದಲ ಬಾರಿಗೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮತ್ತೊಮ್ಮೆ ಮುಂದುವರೆಸುವಂತೆ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ.

ಇದಕ್ಕೆ ಒಪ್ಪದ ಬಿಜೆಪಿ‌, ನಮಗೂ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ನಾಮಪತ್ರ ಸಲ್ಲಿಸುವುದಾಗಿ ಪಕ್ಷದವರು ತಿಳಿಸಿದ್ದಾರೆ. ಎರಡು ಪಕ್ಷಗಳಿಗೆ ಸ್ಪಷ್ಟ ಬಹುಮತ ಇಲ್ಲದಿರುವ ಕಾರಣ, ಎರಡು ಪಕ್ಷಗಳ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.