ಬೆಳಗಾವಿ: ಕುಡಿದ ಮತ್ತಿನಲ್ಲಿ ಮಹಿಳೆಯರು ಕಿತ್ತಾಟ ನಡೆಸಿದ ಘಟನೆ ಬೆಳಗಾವಿಯ ಖಡೇಬಜಾರ್ನಲ್ಲಿ ನಡೆದಿದ್ದು, ಕಿತ್ತಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕುಡಿದ ಮತ್ತಿನಲ್ಲಿ ಮಹಿಳೆಯರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ವೇಶ್ಯಾವಾಟಿಕೆ ವಿಚಾರವಾಗಿ ಕಿತ್ತಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 'ನನ್ನ ಏರಿಯಾದಲ್ಲಿ ನೀ ಏಕೆ ಬಂದಿದ್ದೀಯಾ? ಎಂದು ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿ - ಹೊಡೆದಾಟ ನಡೆಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಬೆಳಗಾವಿಯ ಖಡೇಬಜಾರ್ ಪ್ರದೇಶ ವೇಶ್ಯಾವಾಟಿಕೆ ಅಡ್ಡೆಯಾಗುತ್ತಿದೆಯಾ? ಎಂಬ ಅನುಮಾನಗಳು ಮೂಡತೊಡಗಿವೆ. ಮಹಿಳೆಯರ ಗಲಾಟೆ ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತಾಗಿದ್ದು, ನಂತರ ಟ್ರಾಫಿಕ್ ಪೊಲೀಸ್, ಮಹಿಳಾ ಪೇದೆಗಳು ಜಗಳವನ್ನು ನಿಯಂತ್ರಿಸಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ