ETV Bharat / city

ಬೆಳಗಾವಿ : ಹೆರಾಯಿನ್, ಗಾಂಜಾ ಮಾರಾಟ, ನಾಲ್ವರ ಬಂಧನ

ಗೋಕಾಕ್​ನಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗೋಕಾಕ್ ಶಹರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ..

author img

By

Published : May 22, 2022, 12:45 PM IST

drugs-pedler-arrested-by-gokak-police
ಬೆಳಗಾವಿ : ಹೆರಾಯಿನ್, ಗಾಂಜಾ ಮಾರಾಟ, ನಾಲ್ವರ ಬಂಧನ

ಬೆಳಗಾವಿ : ಹೆರಾಯಿನ್, ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಗೋಕಾಕ್ ಶಹರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಳಗಾವಿಯ ಮೂಲದ ಅಬ್ದುಲ್ ಖಾದಿರ್ ನಾಯಿಕ್, ಮೋಹ್ಸಿನ್ ಜಮಾದಾರ್, ಸಲ್ಮಾನ್ ಮುಲ್ಲಾ ಮತ್ತು ಗೋಕಾಕ್‌ನ ಅರ್ಬಾಜ್ ಶಬಾಸ್‌ಖಾನ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ, 8 ಗ್ರಾಂನ 87 ಹೆರಾಯಿನ್(ಪೆನ್ನಿ) ಪಾಕೆಟ್, 600 ಗ್ರಾಂ ಗಾಂಜಾ, ಕಾರು, ದ್ವಿಚಕ್ರವಾಹನ ಮತ್ತು 5 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಗೋಕಾಕ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ..

ಕಾರಿನಲ್ಲಿ ಮಾದಕವಸ್ತು ಮಾರಾಟ ಮಾಡಲು ಬಂದಿದ್ದ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾರಾಟ ಮಾಡಲು ಬಂದಿದ್ದ ಮೂವರು, ಖರೀದಿಗೆ ಬಂದಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಸದ್ಯ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ವಿಡಿಯೋ: ರೋಡ್​ ರೋಲರ್​ ಚಲಾಯಿಸಿ ಭಾರಿ ಪ್ರಮಾಣದ ಮದ್ಯ ನಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.