ETV Bharat / city

ಬೆಳಗಾವಿಯಲ್ಲಿ ಅಧಿವೇಶನಕ್ಕೆ ತೆರೆ : ಕುಂದಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​..!

ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲ ಅಧಿವೇಶನ ಮುಕ್ತಾಯಗೊಂಡಿದೆ. ಅಧಿವೇಶನಕ್ಕೆ ಬಂದವರೆಲ್ಲರೂ ಕೈಯಲ್ಲಿ ಕುಂದಾ ಹಿಡಿದುಕೊಂಡು ಹೋಗುತ್ತಿದ್ದಾರೆ. ಇದರಿಂದ ಕುಂದಾಗೆ ಭಾರಿ ಡಿಮ್ಯಾಂಡ್ ಬಂದಿದೆ. ಅಷ್ಟೆ ಅಲ್ಲದೆ, ಅಧಿವೇಶನ ಹಿನ್ನೆಲೆ ದಿನಕ್ಕೆ 1ಸಾವಿರ ಕೆಜಿಯಷ್ಟು ಕುಂದಾ ಮಾರಾಟ ಆಗ್ತಿದೆ ಎಂಬ ಮಾಹಿತಿ ಸಿಕ್ಕಿದೆ.

demand-for-belagavi-kunda
ಬೆಳಗಾವಿ ಕುಂದಾ
author img

By

Published : Dec 25, 2021, 7:27 AM IST

ಬೆಳಗಾವಿ : ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲ ಅಧಿವೇಶನಕ್ಕೆ ತೆರೆ ಬಿದ್ದ ಹಿನ್ನೆಲೆ, ದಾಖಲೆ ಪ್ರಮಾಣದಲ್ಲಿ ಕುಂದಾ ಮಾರಾಟವಾಗಿದ್ದು, ಕುಂದಾಗೆ ಭಾರಿ ಡಿಮ್ಯಾಂಡ್ ಬಂದಿದೆ. ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿ‌ನಿಧಿಗಳು ಹಾಗೂ ಪತ್ರಕರ್ತರು ಬೆಳಗಾವಿ ಸಿಹಿ ಕುಂದಾಗೆ ಫಿದಾ ಆಗಿದ್ದು ಖರೀದಿಸಲು ಮುಗಿಬೀಳುತ್ತಿದ್ದಾರೆ. ಒಬ್ಬೊಬ್ಬರು ಒಂದು ಕೆಜಿಯಿಂದ ನಾಲ್ಕೈದು ಕೆಜಿವರೆಗೆ ಕುಂದಾ ಖರೀದಿಸಿ ತಮ್ಮ ಕುಟುಂಬಸ್ಥರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

Belagavi winter session -2021 : ಕಳೆದ ಡಿ.13ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲ ಅಧಿವೇಶನಕ್ಕೆ ಶುಕ್ರವಾರ(ಡಿ.24) ಕೊನೆಯ ದಿನವಾಗಿದ್ದು, ಅಧಿವೇಶನಕ್ಕೆ ಬಂದವರೆಲ್ಲರೂ ಕೈಯಲ್ಲಿ ಕುಂದಾ ಹಿಡಿದುಕೊಂಡು ಹೋಗುತ್ತಿದ್ದಾರೆ. ನಗರದ ಕ್ಯಾಪ್ ಪ್ರದೇಶದಲ್ಲಿ ಪುರೋಹಿತ ಸ್ವೀಟ್ ಮಾರ್ಟ್ ಸೇರಿದಂತೆ ಇತರ ಅಂಗಡಿಗಳಲ್ಲಿ ಪೊಲೀಸರು, ಅಧಿಕಾರಿಗಳು ಅಷ್ಟೇ ಅಲ್ಲದೇ ಶಾಸಕರು‌ ಕೂಡ ಕುಂದಾ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಕುಂದಾ ಖರೀದಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ : ಬೆಳಗಾವಿ ಅಧಿವೇಶನಕ್ಕೆ ಬಂದಿದ್ದ ಶಾಸಕ ರಂವೀದ್ರ ಶ್ರೀಕಂಠಯ್ಯ ಕುಂದಾ, ಕರದಂಟು ಖರೀದಿಸಿದರು. ಈ ವೇಳೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಬೆಳಗಾವಿಗೆ ಬಂದಾಗ ಕುಟುಂಬ ಸದಸ್ಯರು ಕುಂದಾ ತಗೊಂಡು ಬನ್ನಿ ಅಂತಾರೆ. ಹೀಗಾಗಿ ಇಲ್ಲಿಗೆ ಬಂದಾಗ ಕುಂದಾ, ಕರದಂಟು ಖರೀದಿಸಿ‌ ಮನೆಗೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ಅಧಿವೇಶನ ವೇಳೆ ದಾಖಲೆ ಪ್ರಮಾಣದಲ್ಲಿ ಕುಂದಾ ಮಾರಾಟ : ಕೊರೊನಾ ನಂತರದಲ್ಲಿ ದಿನಗಳಲ್ಲಿ ಅತಿ ಹೆಚ್ಚು ಕುಂದಾ ಬೆಳಗಾವಿ ಅಧಿವೇಶನದಲ್ಲಿ ಮಾರಾಟವಾಗಿದೆ. ಈ ಮೊದಲು ನಿತ್ಯ 300ರಿಂದ 400 ಕೆಜಿಯಷ್ಟು ಮಾರಾಟ ಆಗ್ತಿತ್ತು. ಈಗ ಅಧಿವೇಶನ ಹಿನ್ನೆಲೆ ದಿನಕ್ಕೆ 1ಸಾವಿರ ಕೆಜಿಯಷ್ಟು ಕುಂದಾ ಮಾರಾಟ ಆಗ್ತಿದೆ. ಕುಂದಾ ತಯಾರಿಸಲು ಬೆಳಗಾವಿ ಜಿಲ್ಲೆಯಲ್ಲಿ ಖವಾ, ಹಾಲು ಸಾಕಾಗುತ್ತಿಲ್ಲ. ಹೀಗಾಗಿ ಮಹಾರಾಷ್ಟ್ರದಿಂದ ಹಾಲು, ಖವಾ ಖರೀದಿಸಿಕೊಂಡು ಕುಂದಾ ತಯಾರಿಸಲಾಗುತ್ತಿದೆ ಎಂದು ಬೆಳಗಾವಿಯಲ್ಲಿ ಸ್ವೀಟ್ ಮಾರ್ಟ್ ಮಾಲೀಕ ರಾಜ್ ಪುರೋಹಿತ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.