ETV Bharat / city

ಕೋವಿಡ್ ಮೂರನೇ ಅಲೆ ಭೀತಿ: ಬೆಳಗಾವಿ ಚೆಕ್‌ಪೋಸ್ಟ್ ಬಳಿ ಕಟ್ಟೆಚ್ಚರ

author img

By

Published : Jul 31, 2021, 10:02 AM IST

ಪಕ್ಕದ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಕರ್ನಾಟಕಕ್ಕೂ 3ನೇ ಭೀತಿ ಅಲೆ ಎದುರಾಗಿದೆ. ಈ ಹಿನ್ನೆಲೆ ಬೆಳಗಾವಿ ಹೊರವಲಯದ ಬಾಚಿ ಚೆಕ್‌ಪೋಸ್ಟ್ ಬಳಿ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

covid test in belgavi checkpost
ಚೆಕ್‌ಪೋಸ್ಟ್ ಬಳಿ ಕಟ್ಟೆಚ್ಚರ

ಬೆಳಗಾವಿ: ನೆರೆಯ ರಾಜ್ಯಗಳಿಂದಲೇ ಕರ್ನಾಟಕಕ್ಕೆ ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ ಬೆಳಗಾವಿ ಹೊರವಲಯದ ಬಾಚಿ ಚೆಕ್‌ಪೋಸ್ಟ್ ಬಳಿ ಜಿಲ್ಲಾಡಳಿತದಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಚೆಕ್‌ಪೋಸ್ಟ್ ಬಳಿ ಕಟ್ಟೆಚ್ಚರ

ಕೇರಳದಲ್ಲಿ 20ಸಾವಿರಕ್ಕೂ ಹೆಚ್ಚು, ಮಹಾರಾಷ್ಟ್ರದಲ್ಲಿ ನಿತ್ಯ 7 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್​ಗಳು ಪತ್ತೆಯಾಗುತ್ತಿವೆ. ಹೀಗಾಗಿ ರಾಜ್ಯಕ್ಕೆ ಪ್ರವೇಶ ನೀಡುವ ಮಹಾರಾಷ್ಟ್ರ- ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಬಾಚಿ ಗ್ರಾಮದಲ್ಲಿ ಜಿಲ್ಲಾಡಳಿತ ಚೆಕ್‌ಪೋಸ್ಟ್ ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದೆ.

ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಅಥವಾ ವ್ಯಾಕ್ಸಿನೇಷನ್‌ ಪ್ರಮಾಣಪತ್ರ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಎಂಟ್ರಿ ಕೊಡಲಾಗುತ್ತಿದೆ. ಎರಡೂ ಇಲ್ಲದೇ ಬರುವ ಪ್ರಯಾಣಿಕರಿಗೆ ಚೆಕ್‌ಪೋಸ್ಟ್ ಬಳಿಯೇ ಕೋವಿಡ್ ತಪಾಸಣಾ ಕೇಂದ್ರ ಸ್ಥಾಪಿಸಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಯಾಣಿಕರಿಗೆ ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡುತ್ತಿದ್ದಾರೆ. ರ‌್ಯಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬಂದ್ರೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದ್ದು, ಒಂದು ವೇಳೆ ಪಾಸಿಟಿವ್ ಬಂದ್ರೆ ಮಹಾರಾಷ್ಟ್ರ ಅಧಿಕಾರಿಗಳಿಗೆ ಮಾಹಿತಿ ನೀಡಿ ವಾಪಸ್ ಕಳಿಸಲಾಗುತ್ತಿದೆ.

ಹೀಗಾಗಿ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹಾಗೂ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡು ಬರಬೇಕಿದೆ.

ಇದನ್ನೂ ಓದಿ:ಎರಡು ಡೋಸ್ ವ್ಯಾಕ್ಸಿನ್‌/RT-PCR ಸರ್ಟಿಫಿಕೇಟ್‌ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.