ಬೆಳಗಾವಿ: ಜಿಲ್ಲೆಯಲ್ಲಿಂದು 202 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಬಲಿಯಾಗಿದ್ದಾರೆ.
ಗೋಕಾಕ್ನ 50 ವರ್ಷದ ಪುರುಷ, 66 ವರ್ಷದ ಮಹಿಳೆ, ರಾಯಭಾಗದ 46 ವರ್ಷದ ಮಹಿಳೆ ಹಾಗೂ ಬೆಳಗಾವಿಯ 54 ವರ್ಷದ ಪುರುಷ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 3,019ಕ್ಕೆ ಏರಿಕೆಯಾಗಿದೆ.
ಈವರೆಗೆ 856 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 2,098 ಸಕ್ರಿಯ ಪ್ರಕರಣಗಳಿವೆ.