ಬೆಳಗಾವಿ: ಜಿಲ್ಲೆಯಲ್ಲಿಂದು 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ.
ಸವದತ್ತಿ ತಾಲೂಕಿನ ಕರಿಕಟ್ಟಿ ಗ್ರಾಮದ 8 ಜನರು, ಕ್ಯಾಂಪ್ ಪೊಲೀಸ್ರಿಂದ ಬಂಧಿತನಾಗಿದ್ದ ಮಜಗಾಂವ ಗ್ರಾಮದ 29 ವರ್ಷದ ಪುರುಷ, ಬಿಮ್ಸ್ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ಸದಾಶಿವ ನಗರದ 30 ವರ್ಷದ ಮಹಿಳೆ, ಮಜಗಾಂವ ಗ್ರಾಮದ 29 ವರ್ಷದ ಮಹಿಳೆ, ಕುದ್ರೆಮನಿ ಗ್ರಾಮದ 46 ವರ್ಷದ ಪುರುಷ ಹಾಗೂ ಹುಕ್ಕೇರಿಯ ವಾಡಿಶಾದ್ಯಾಳ ನಿವಾಸಿ 28 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರು ವಾಸವಿದ್ದ ಮನೆಯ 50 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ನಾಲ್ವರು ಮೃತಪಟ್ಟಿದ್ದು, 306 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 48 ಸಕ್ರಿಯ ಪ್ರಕರಣಗಳಿವೆ.