ETV Bharat / city

ಎತ್ತಿನ ಗಾಡಿಯಲ್ಲಿ ಬಂದು ಚಿಂಚಲಿ ಮಾಯಕ್ಕನಿಗೆ ನೈವೇದ್ಯ ಅರ್ಪಿಸಿದ ಮಹಾರಾಷ್ಟ್ರ ಭಕ್ತರು - Mayakka Devi Fair canceled

ಪ್ರತಿ ವರ್ಷ ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹೀಗೆ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಜಾತ್ರೆಗೆ ಶೇ 80ರಷ್ಟು ಭಕ್ತರು ಆಗಮಿಸಿಲ್ಲ. ಈ ನಡುವೆ ಕೆಲ ಭಕ್ತರು ಮಾತ್ರ ಎತ್ತಿನ ಬಂಡಿಯಲ್ಲಿ ಮಹಾರಾಷ್ಟ್ರದಿಂದ ಬಂದು ಚಿಂಚಲಿ ಮಾಯಕ್ಕಾ ದೇವರಿಗೆ ನೈವೇದ್ಯ ಅರ್ಪಿಸಿದರು.

Breaking News
author img

By

Published : Mar 1, 2021, 5:10 PM IST

ಚಿಕ್ಕೋಡಿ : ಈ ಬಾರಿ ಕೊರೊನಾ ಮಹಾಮಾರಿಯಿಂದ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆ ರದ್ದುಗೊಳಿಸಿದ್ದರೂ ಭಕ್ತರು ಮಾತ್ರ ಜಾತ್ರೆಗೆ ಆಗಮಿಸಿ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡಿ ನೈವೇದ್ಯ ಅರ್ಪಿಸುತ್ತಿದ್ದಾರೆ.

ಚಿಂಚಲಿ ಮಾಯಕ್ಕಾ ದೇವಿ ಉತ್ತರ ಕರ್ನಾಟಕ‌ ಹಾಗೂ ದಕ್ಷಿಣ ಮಹಾರಾಷ್ಟ್ರದ ಆರಾಧ್ಯ ಶಕ್ತಿ ದೇವತೆಯಾಗಿದ್ದು, ಭಾರತ ಹುಣ್ಣಿಮೆ ನಂತರ ಬರುವ ಹಸ್ತಾ ನಕ್ಷತ್ರದ ಶುಭಗಳಿಗೆಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಪ್ರತಿ ವರ್ಷ ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹೀಗೆ ಇತರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಜಾತ್ರೆಗೆ ಶೇ 80 ರಷ್ಟು ಭಕ್ತರು ಆಗಮಿಸಿಲ್ಲ. ಈ ನಡುವೆ ಕೆಲ ಭಕ್ತರು ಮಾತ್ರ ಎತ್ತಿನ ಬಂಡಿಯಲ್ಲಿ ಮಹಾರಾಷ್ಟ್ರದಿಂದ ಬಂದು ಮಾಯಕ್ಕಾ ದೇವರಿಗೆ ನೈವೇದ್ಯ ಅರ್ಪಿಸಿದರು.

ಎತ್ತಿನ ಗಾಡಿಯಲ್ಲಿ ಬಂದು ನೈವೇದ್ಯ ಅರ್ಪಿಸಿದ ಮಹಾ ಭಕ್ತರು

ದೇವಿಯ ಹಿನ್ನಲೆ :

ಮಾಯಕ್ಕಾ ದೇವಿಯು ಮಹಾರಾಷ್ಟ್ರದ ಮಾನದೇಶ (ಕೊಂಕಣ)ದಿಂದ ಬಂದವಳು ಎಂದು ಹೇಳುತ್ತಾರೆ. ಕೀಲ ಮತ್ತು ಕಟ್ಟರೆಂಬ ರಾಕ್ಷಸರನ್ನು ಬೆನ್ನಟ್ಟಿ ಬಂದು ಚಿಂಚಲಿಯಲ್ಲಿ ಅವರನ್ನು ಸಂಹರಿಸಿ ಅಲ್ಲಿಯೇ ನೆಲೆಯೂರಿದ್ದಾಳೆಂದು ಐತಿಹಾಸಿಕ ಕಥೆಗಳು ಹೇಳುತ್ತವೆ. ಭಕ್ತರು ಕೈಯಲ್ಲಿ ಬೆತ್ತದ ಕೋಲು ಹಿಡಿದು ವೀರಾವೇಶದಿಂದ ಕುಣಿಯುತ್ತಾರೆ. ಹಿರಿಯರ ಪ್ರಕಾರ ಚಿಂಚಲಿಯಲ್ಲಿ ಹಿರಿದೇವಿ ಮೂಲ ದೇವತೆ ಇವಳೇ ಗ್ರಾಮ ದೇವತೆ.

ಮಾಯಕ್ಕಾದೇವಿ ಹಿರಿದೇವಿಯ ಆಶ್ರಯ ಪಡೆದು ಚಿಂಚಲಿಯಲ್ಲಿ ನೆಲೆಸಿದಳು. ಅದಕ್ಕಾಗಿ ಮೊದಲ ಪ್ರಾಶಸ್ತ್ಯ ಹಿರಿದೇವಿಗೆ ಸಲ್ಲುತ್ತದೆ. ಈಗಲೂ ಮೊದಲು ಹಿರಿದೇವಿ ದರ್ಶನ ಮಾಡಿ ನೈವೇದ್ಯ ಸಲ್ಲಿಸಿ ನಂತರ ಮಾಯಕ್ಕಾದೇವಿಗೆ ನೈವೇದ್ಯ ಸಲ್ಲಿಸುತ್ತಾರೆ ಭಕ್ತರು. ಸುಮಾರು ನೂರು ವರ್ಷಗಳಿಂದ ದೇವರ ದರ್ಶನಕ್ಕೆ ಎತ್ತಿನ‌ ಬಂಡಿಯಲ್ಲಿ ಬಂದು ನೈವೇದ್ಯ ತೋರಿಸುವುದು ವಾಡಿಕೆ ಎನ್ನುತ್ತಾರೆ ಮಹಾರಾಷ್ಟ್ರದ ಜನರು.

ಇದನ್ನೂ ಓದಿ.. ಶಾಪ ವಿಮೋಚನೆ ಮಾಡಿ, ಸರ್ಕಾರದಲ್ಲಿ ಜವಾಬ್ದಾರಿ ಕೊಡಿ; ಎಚ್​. ವಿಶ್ವನಾಥ್

ಈಗಲೂ ಸಹ ಕೂಡಾ ಅಪಾರ ಸಂಖ್ಯೆಯಲ್ಲಿ ಮಹಾರಾಷ್ಟ್ರದಿಂದ ಭಕ್ತರು ಎತ್ತಿನ ಗಾಡಿಯ ಮೂಲಕ ಹಾಡುತ್ತಾ ಕುಣಿಯತ್ತಾ ದೇವಿಯ ದರ್ಶನ ಪಡೆಯಲು ಬರುತ್ತಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.