ETV Bharat / city

ರಾಹುಕಾಲದಲ್ಲಿ ನಾಮಪತ್ರ, ಸ್ಮಶಾನದಲ್ಲಿ ವಾಸ್ತವ್ಯ.. ಸೈದ್ಧಾಂತಿಕ ರಾಜಕಾರಣದ 'ಶರಣ' ಸತೀಶ್.. - Satish Zarakihulli who was staying at the crematorium

ಮೂರು ದಶಕಗಳಲ್ಲಿ ತಮ್ಮ ಪಕ್ಷದ ಇತರ ನಾಯಕರ ನಿಲುವು ಬದಲಾದರೂ ಸತೀಶ್​ ಜಾರಕಿಹೊಳಿ ಮಾತ್ರ ಮೂಢನಂಬಿಕೆ, ಅಂಧಶೃದ್ಧೆ ಹಾಗೂ ವಾಮಾಚಾರಗಳಂಥ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು ಮೆಚ್ಚುಗೆಗೆ ಪಾತ್ರರಾದರು..

Naming ceremony
ಸ್ಮಶಾನದಲ್ಲಿ ನಾಮಕರಣ
author img

By

Published : Jan 18, 2021, 5:58 PM IST

Updated : Jan 18, 2021, 7:35 PM IST

ಬೆಳಗಾವಿ : ಬಹುತೇಕ ನಾಯಕರು ಮತ ರಾಜಕಾರಣದಲ್ಲೇ ನಿರತರಾಗಿರುವಾಗ ಈ ಸಂದರ್ಭದಲ್ಲಿ ಸೈದ್ಧಾಂತಿಕ ರಾಜಕಾರಣದ ಮೂಲಕ ವಿಶೇಷ ಛಾಪು ಮೂಡಿಸಿದವರು ಶಾಸಕ ಸತೀಶ್​ ಜಾರಕಿಹೊಳಿ.

ಅವರು ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದು ಜನತಾ ಪಕ್ಷಕ್ಕೆ ಸೇರುವ ಮೂಲಕ. ನಂತರ ಕಾಂಗ್ರೆಸ್​​ನತ್ತ ಮುಖ ಮಾಡಿದರು. ಈಗ ಆ ಪಕ್ಷದ ಹಿರಿಯ ನಾಯಕ. ಅವರು ರಾಜಕೀಯ ಪ್ರವೇಶಕ್ಕೂ ಮುನ್ನವೇ ಮೌಢ್ಯದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ಮೂಲಕ ಮನೆ ಮಾತಾಗಿದ್ದರು.

ಮೂರು ದಶಕಗಳಲ್ಲಿ ತಮ್ಮ ಪಕ್ಷದ ಇತರ ನಾಯಕರ ನಿಲುವು ಬದಲಾದ್ರೂ ತಾನು ಮಾತ್ರ ಮೂಢನಂಬಿಕೆ, ಅಂಧಶೃದ್ಧೆ ಹಾಗೂ ವಾಮಾಚಾರಗಳಂಥ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡರು.

ಮೂಢನಂಬಿಕೆಗಳ ವಿರುದ್ಧ ಕೆಲವರು ಆವೇಶ ಭರಿತ ಭಾಷಣ ಮಾಡಿದ್ದು ಬಿಟ್ಟರೆ ನೈಜ ಹೋರಾಟಕ್ಕೆ ಇಳಿದಿರಲಿಲ್ಲ. ಆದರೆ, ಸತೀಶ್​ ಜಾರಕಿಹೊಳಿ ಹಾಗಲ್ಲ. ನೈಜ ಹೋರಾಟದ ಜೊತೆಗೆ ತಮ್ಮ ಮಾತು-ಕೃತಿ, ಸಂಘಟನೆ ಮೂಲಕ ವಿಭಿನ್ನ ಪ್ರತಿರೋಧದ ಹೊಸ ಮಾದರಿ ರೂಪಿಸಿದರು.

ತನ್ನ ವಿರುದ್ಧ ಎಷ್ಟೇ ವಿರೋಧ ವ್ಯಕ್ತವಾದ್ರೂ ತಾವು ನಂಬಿದ ಸಿದ್ಧಾಂತವನ್ನು ಬಹಿರಂಗವಾಗಿ ಹೇಳುವ ಮೂಲಕ ನೇರ ನುಡಿಗೆ ಹೆಸರಾದವರು. ಮತ್ತೊಬ್ಬರನ್ನು ಪ್ರೇರೇಪಿಸುವ ರಾಜಕಾರಣಿಯೂ ಹೌದು. ಬುದ್ಧ, ಬಸವಣ್ಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿರುವ ಅವರು, ಮೌಢ್ಯದ ವಿರುದ್ಧ ಜಾಗೃತಿ ಹಾಗೂ ಸಮಾಜ ಸೇವೆಗಾಗಿ ಪ್ರತಿ ವರ್ಷ ₹5 ಕೋಟಿ ಮೀಸಲಿಡುತ್ತಾರೆ. 'ಮೂಢನಂಬಿಕೆಗಳಿಂದ ಸಮಾಜ ಬದಲಾದ್ರೆ ನನ್ನ ಕೆಲಸ ಹಾಗೂ ಹಣ ವೆಚ್ಚ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ' ಎಂದು ಸತೀಶ್ ಜಾರಕಿಹೊಳಿ ಈಟಿವಿ ಭಾರತಕ್ಕೆ ಹೇಳಿದರು.

ಶಾಸಕ ಸತೀಶ್​ ಜಾರಕಿಹೊಳಿ

ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಗೆದ್ದ ಸತೀಶ್​!

ರಾಹುಕಾಲ ಅಂದರೆ ಸಾಕು ಕೆಲವರು ಯಾವ ಕೆಲಸಕ್ಕೂ ಮುಂದಾಗುವುದಿಲ್ಲ. ಆದರೆ, ಸತೀಶ್​ ಅದಕ್ಕೆ ತದ್ವಿರುದ್ಧ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದ ಸತೀಶ್​ ಜಾರಕಿಹೊಳಿ ಎಲ್ಲರ ಗಮನ ಸೆಳೆದಿದ್ದರು. ಎಷ್ಟೋ ಮಂದಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಸೋಲು ಖಚಿತ ಎಂಬ ಮಾತುಗಳನ್ನಾಡಿದ್ದರು. ಸರಿಯಾಗಿ ಒಂದೂ ದಿನವೂ ಪ್ರಚಾರ ಕೈಗೊಂಡಿರಲಿಲ್ಲ. ಕ್ಷೇತ್ರದಲ್ಲಿ ಫ್ಲೆಕ್ಸ್​​​, ಬ್ಯಾನರ್ ಅಳವಡಿಸಿರಲಿಲ್ಲ. ಆದರೆ, ಶುಭ ಘಳಿಗೆ ಎಂಬ ಭಾವನೆಗಳಿಂದ ದೂರವಿದ್ದ ಅವರು, ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆಯುವ ಮೂಲಕ ಸೋಲುತ್ತಾರೆ ಎಂದಿದ್ದವರ ಬಾಯಿ ಮುಚ್ಚಿಸಿದರು. ತಾನು ಮೂಢನಂಬಿಕೆಗಳಿಂದ ದೂರ ಎಂಬುದನ್ನು ತೋರಿಸಿಕೊಟ್ಟರು.

ಮಕ್ಕಳ ಜೊತೆಗೆ ಸ್ಮಶಾನದಲ್ಲಿ ವಾಸ್ತವ್ಯ!

ಡಿಸೆಂಬರ್ 6ರಂದು ಬೆಳಗಾವಿಯಲ್ಲಿ ನಡೆಯುವ ಸ್ಮಶಾನದಲ್ಲಿ ವಾಸ್ತವ್ಯ ಕಾರ್ಯಕ್ರಮಕ್ಕೆ ರಾಜ್ಯವಷ್ಟೇ ಅಲ್ಲದೇ ನೆರೆರಾಜ್ಯದವರು, ವಿವಿಧ ಮಠಾಧೀಶರು ಹಾಗೂ ರಾಜಕೀಯ ನಾಯಕರು, ಚಿಂತಕರು ಪಾಲ್ಗೊಳ್ಳುತ್ತಾರೆ. ಇಡೀ ದಿನ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ, ಚಿಂತನ-ಮಂಥನ ನಡೆಯುತ್ತದೆ. ಕಾರ್ಯಕ್ರಮದ ಬಳಿಕ ರಾತ್ರಿ ಸ್ಮಶಾನದಲ್ಲೇ ವಾಸ್ತವ್ಯ ಹೂಡುತ್ತಾರೆ. ವಿಶೇಷ ಅಂದರೆ, ಸ್ಮಶಾನದಲ್ಲೇ ಊಟ, ಉಪಹಾರ ತಯಾರಿಸಿ ಅಂದು 50 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡುತ್ತಾರೆ. ಸತೀಶ್ ಕೂಡ ತಮ್ಮ ಮಕ್ಕಳ ಜೊತೆಗೆ ಸ್ಮಶಾನದಲ್ಲೇ ಊಟ ಸವಿದು, ವಾಸ್ತವ್ಯ ಹೂಡುತ್ತಾ ಬಂದಿದ್ದಾರೆ.

The cemetery is located in the cemetery
ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದ ಜಾರಕಿಹೊಳಿ

ಸ್ಮಶಾನದಲ್ಲಿ ಮದುವೆ, ನಾಮಕರಣ!

ಸತೀಶ್​ ಜಾರಕಿಹೊಳಿ ಮೌಢ್ಯದ ವಿರುದ್ಧದ ಜಾಗೃತಿಗೆ ಮನಸೋತು ಅವರ ಸಮ್ಮುಖದಲ್ಲಿ ಬೆಳಗಾವಿ ಹಾಗೂ ಕಲಬುರಗಿಯ ಎರಡು ಜೋಡಿಗಳು ಸ್ಮಶಾನದಲ್ಲೇ ಸರಳವಾಗಿ ವಿವಾಹವಾಗುವ ಮೂಲಕ ಮಾದರಿಯಾಗಿದ್ದರು. ಇನ್ನು ನಿಪ್ಪಾಣಿ ತಾಲೂಕಿನ ಗ್ರಾಮವೊಂದರಲ್ಲಿ ಸತೀಶ್​ ಬೆಂಬಲಿಗ ಕುಟುಂಬವೊಂದು ಸ್ಮಶಾನದಲ್ಲೇ ತಮ್ಮ ಮಗುವಿಗೆ ನಾಮಕಾರಣ ಮಾಡಿದೆ. ಅಲ್ಲದೇ ಸತೀಶ್​​ ಇತ್ತೀಚಿಗೆ ಖರೀದಿಸಿದ ನೂತನ ಫಾರ್ಚುನರ್ ಕಾರಿಗೆ ಸ್ಮಶಾನದಲ್ಲೇ ಚಾಲನೆ ನೀಡಿ ಗಮನ ಸೆಳೆದಿದ್ದರು.

Congress working president identified in Ideological politics
ಫಾರ್ಚೂನರ್​ ಕಾರಿಗೆ ಚಾಲನೆ ನೀಡಿದ್ದ ಸತೀಶ್ ಜಾರಕಿಹೊಳಿ

ನಾಗರಪಂಚಮಿ ದಿನದಂದು 1,000 ಕಾರ್ಯಕ್ರಮ!

ನಾಗರಪಂಚಮಿ ದಿನದಂದು ನಾಗರ ಹುತ್ತಕ್ಕೆ ಹಾಲು ಎರೆಯುವುದು ಸಂಪ್ರದಾಯ. ಆದರೆ, ಸತೀಶ್​​​ ಜಾರಕಿಹೊಳಿ ಇದರ ವಿರುದ್ಧ ರಾಜ್ಯದಲ್ಲಿ 1,000 ಕಡೆ ವಿಶೇಷ ಜಾಗೃತಿ ಮೂಡಿಸಿ, ಬಡ ಮಕ್ಕಳಿಗೆ ಆ ಹಾಲು ತಲುಪುವಂತೆ ಮಾಡಿದರು. ಹುತ್ತಕ್ಕೆ ಹಾಲು ಎರೆದ್ರೆ ಯಾವುದೇ ಲಾಭವಿಲ್ಲ. ಬಡ ಮಕ್ಕಳಿಗೆ ಹಾಲುಣಿಸುವ ಕೆಲಸವಾಗಬೇಕು ಎಂದು ಸಾವಿರಾರು ಜನರ ಮನಃಪರಿವರ್ತನೆಗೆ ಕಾರಣರಾದರು.

ಗ್ರಹಣದ ಸಮಯದಲ್ಲಿ ಊಟ, ಉಪಹಾರ ಸೇವನೆ, ವಿಧವರೆಯರಿಂದ ಗೃಹಪ್ರವೇಶ ಹೀಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅಮಾವಾಸ್ಯೆ ದಿನದಂದು ಸ್ಮಶಾನದಲ್ಲಿ ಕವಿಗೋಷ್ಠಿ ಆಯೋಜಿಸಿ ಎಲ್ಲರಿಗಿಂತ ವಿಭಿನ್ನ ಎಂದು ತೋರಿಸಿದರು. ಅಲ್ಲದೇ, ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿರುವ ಅವರು, ರೈತರಿಗೆ ಸಾವಯವ ಕೃಷಿ ತರಬೇತಿ, ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಬೆಳೆಸಲು ರಾಜ್ಯದಲ್ಲಿ ಪ್ರವಾಸ, ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ.

Last Updated : Jan 18, 2021, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.