ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಜಯ ಸಾಧಿಸಿದ್ದಾರೆ. ತೀವ್ರ ಸ್ಪರ್ಧೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಸೋಲನುಭವಿಸಿದ್ದಾರೆ.
ಬೆಳಗಾವಿ ಕ್ಷೇತ್ರದ ಮೊದಲ ಮಹಿಳಾ ಸಂಸದೆಯಾಗಿ ಮಂಗಳಾ ಅಂಗಡಿ ಆಯ್ಕೆ ಆಗಿದ್ದು, ಹೊಸ ಇತಿಹಾಸ ಸೃಷ್ಠಿಸಿದ್ದಾರೆ. ಮಂಗಳಾ ಅಂಗಡಿ ಅವರಿಗೆ ರೋಚಕ ಜಯ ಲಭಿಸಿದೆ. ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅವರು ಅಧಿಕೃತವಾಗಿ ಪ್ರಮಾಣಪತ್ರ ಸ್ವೀಕರಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್‌ಕುಮಾರ್ ಅವರು ಪ್ರಮಾಣಪತ್ರ ನೀಡಿದರು.
(ಇದನ್ನೂ ಓದಿ: ನೀನೇ 'ಭಗವಂತ'ನೆಂದು ಕಾಲಿಗೆರಗಿ 'ಶರಣು' ಎಂದ ಸಲಗಾರ.. ಶಿಕ್ಷಕನೊಬ್ಬ ಬಸವಕಲ್ಯಾಣಕ್ಕೆ ಶಾಸಕನಾದ..)