ETV Bharat / city

ಕಾಲೇಜ್​ ಬಸ್ಸಿ​ಗೆ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ; 20ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ - Bus Accident cases of Belgavi

ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿದ್ದ ಕಾಲೇಜು ಬಸ್ಸಿಗೆ ಕೆಎಸ್​ಆರ್​ಟಿಸಿ ಬಸ್ಸು ಹಿಂದಿನಿಂದ ಡಿಕ್ಕಿ ಹೊಡೆದ ಕಾರಣ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.

College bus and KSRTC Bus accident
ಕಾಲೇಜು ಬಸ್​ಗೆ ಕೆಎಸ್‌ಆರ್‌ಟಿ ಬಸ್ ಡಿಕ್ಕಿ
author img

By

Published : Jun 9, 2022, 12:56 PM IST

ಬೆಳಗಾವಿ: ಕಾಲೇಜ್​ ಬಸ್ಸಿನ ಹಿಂಬದಿಗೆ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಜತ್ತ-ಜಾಂಬೋಟಿ ಹೆದ್ದಾರಿ ಸಮೀಪದ ಗುರ್ಲಾಪುರ ಗ್ರಾಮದ ಬಳಿ ಅಪಘಾತ ಸಂಬಭವಿಸಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಕೆ‌ಎಸ್‌ಆರ್‌ಟಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮೂಡಲಗಿ ಪಟ್ಟಣದ ಖಾಸಗಿ ಕಾಲೇಜಿಗೆ ತೆರಳುತ್ತಿದ್ದ ಬಸ್ಸಿ​ಗೆ ಡಿಕ್ಕಿ ಹೊಡೆದಿದೆ. ಕಾಲೇಜು ಬಸ್ಸನ್ನು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲು ನಿಲ್ಲಿಸಿದಾಗ ಈ ಅವಘಡ ಸಂಭವಿಸಿದೆ.

ಕಾಲೇಜು ಬಸ್​ಗೆ ಕೆಎಸ್‌ಆರ್‌ಟಿ ಬಸ್ ಡಿಕ್ಕಿ

ಈ ವೇಳೆ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆ ಬಸ್ಸು ಹಿಂಬದಿಗೆ ಗುದ್ದಿದ ಪರಿಣಾಮ ಕಾಲೇಜ್​ ಬಸ್ಸಿನಲ್ಲಿದ್ದ 10 ಹಾಗೂ ಸರ್ಕಾರಿ ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ . ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೂಡಲಗಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೈಕ್-ಲಾರಿ ಮುಖಾಮುಖಿ ಡಿಕ್ಕಿ: ಕಿಚ್ಚನ ಹಳ್ಳಿಮನೆ ಹೋಟೆಲ್ ಮ್ಯಾನೇಜರ್ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.