ಬೆಳಗಾವಿ: ನಾವು ಪೌರ ಕಾರ್ಮಿಕರೆಂದು ಹೇಳಿದರೂ ಕೂಡ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಪಾಲಿಕೆಯ ಕಾರ್ಮಿಕರು ಮಹಾನಗರ ಪಾಲಿಕೆ ಆಯುಕ್ತರ ಎದುರು ಅಳಲು ತೋಡಿಕೊಂಡರು.
ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡಿದ ಪಾಲಿಕೆ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಅಳಲು ತೋಡಿಕೊಂಡರು. ತಮಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ನೀಡುವಂತೆ ಪೌರ ಕಾರ್ಮಿಕ ಸಿಬ್ಬಂದಿ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಕೆ.ಹೆಚ್. ಜಗದೀಶ್, ಪೊಲೀಸರಿಗೆ ಗೊತ್ತಾಗದೆ ನಿನ್ನೆ ಈ ರೀತಿ ಆಗಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಜತೆ ಮಾತನಾಡಿದ್ದೇನೆ. ಈಗಾಗಲೇ ಸಿಬ್ಬಂದಿ ಅಗತ್ಯ ಮಾಸ್ಕ್, ಹ್ಯಾಂಡ್‌ಗ್ಲೌಸ್ ಪೂರೈಕೆ ಮಾಡುತ್ತೇವೆ ಎಂದರು.