ETV Bharat / city

ಸಿಇಟಿ ಪರೀಕ್ಷೆ ‌ಫಲಿತಾಂಶ ಪ್ರಕಟ; ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ್‍ಯಾಂಕ್ - ಪಶು ವೈದ್ಯಕೀಯ ವಿಭಾಗದಲ್ಲಿಸಾಧನೆ

ಸಿಇಟಿಯ ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿ 5ನೇ ರ್‍ಯಾಂಕ್​ನಲ್ಲಿ ತೇರ್ಗಡೆ ಹೊಂದಿದ್ದು, ಕೃಷಿ ಮತ್ತು ಇಂಜಿನಿಯರಿಂಗ್ ವಿಭಾದಲ್ಲೂ ಗಮನಾರ್ಹವಾದ ಸಾಧನೆ ಮಾಡಿದೆ,

cet result: 5th rank for belagavi distict student
ಸಿಇಟಿ ಪರೀಕ್ಷೆ ‌ಫಲಿತಾಂಶ ಪ್ರಕಟ; ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ್‍ಯಾಂಕ್
author img

By

Published : Sep 21, 2021, 12:33 AM IST

ಬೆಳಗಾವಿ: ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿ 5ನೇ ರ್‍ಯಾಂಕ್​ನಲ್ಲಿ ತೇರ್ಗಡೆ ಹೊಂದಿದ್ದಾನೆ. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆರ್‌ಎಲ್‌ಎಸ್ ಕಾಲೇಜಿನ ವಿದ್ಯಾರ್ಥಿ ಮಹ್ಮದ್ ಕೈಫ್ ಮುಲ್ಲಾ ಈ ಸಾಧನೆ ಮಾಡಿದ್ದಾನೆ.

ಸಾಂಬ್ರಾದಲ್ಲಿರುವ ಏರ್‌ಪೋರ್ಸ್ ತರಬೇತಿ ಕೇಂದ್ರದಲ್ಲಿ ಈ ವಿದ್ಯಾರ್ಥಿ ತಂದೆ ಕುತ್ಬುದ್ದೀನ್ ಮುಲ್ಲಾ ಕುಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗ, ನ್ಯಾಚುರೋಪಥಿ, ಪಶು ವೈದ್ಯಕೀಯ ವಿಭಾಗದಲ್ಲಿ ಮಹ್ಮದ್​​ ಕೈಫ್ ಐದನೇ ರ್‍ಯಾಂಕ್ ಪಡೆದಿದ್ದಾನೆ.

ಬಿ ಫಾರ್ಮಾ, ಫಾರ್ಮಾ ಡಿ ವಿಭಾಗದಲ್ಲಿ 8ನೇ ರ್‍ಯಾಂಕ್, ಕೃಷಿ ವಿಭಾಗದಲ್ಲಿ 15ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಮಹ್ಮದ್ ಕೈಫ್ ಮುಲ್ಲಾ 119ನೇ ರ್‍ಯಾಂಕ್ ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಒಟ್ಟಾರೆ 240ಕ್ಕೆ ಮಹ್ಮದ್ ಕೈಫ್ 215 ಅಂಕ ಗಳಿಸಿದ್ದಾನೆ.

ಭೌತಶಾಸ್ತ್ರ 60 ರ ಪೈಕಿ 57 ಅಂಕ, ರಸಾಯನಶಾಸ್ತ್ರ 60ರ ಪೈಕಿ 57 ಅಂಕ, ಗಣಿತ 60ರ ಪೈಕಿ 43, ಜೀವಶಾಸ್ತ್ರ 60 ರ ಪೈಕಿ 58 ಅಂಕ ಪಡೆದು ಮಹ್ಮದ್​​ ಕೈಫ್ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.